ಡೊನಾಲ್ಡ್ ಟ್ರಂಪ್ಮತ್ತು ಜೋ ಬಿಡೆನ್​ರಲ್ಲಿ ಯಾರೇ ಗೆದ್ದರೂ ಭಾರತಕ್ಕೆ ಹಿತ ಎಂಬ ಚರ್ಚೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ವೇಳೆ ಕುತೂಹಲ ಕೆರಳಿಸಿದೆ ಮತ್ತು ಭಾರತ ಸರ್ಕಾರ ಕೂಡ ಅತ್ಯಂತ ಸೂಕ್ಷ್ಮವಾಗಿ ಫಲಿತಾಂಶವನ್ನು ಅವಲೋಕಿಸುತ್ತಿದೆ.
ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಆಪ್ತ ಗೆಳೆತನ ಇರುವ ಕಾರಣ ಟ್ರಂಪ್ ಗೆಲುವು ಭಾರತಕ್ಕೆ ಹೆಚ್ಚಿನ ಹಿತದಾಯಕ ಎನ್ನಲಾಗಿದೆ. ಆದರೆ, ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಭಾರತ ಮತ್ತು ಅಮೆರಿಕದ ಭಾಂದವ್ಯ ಹೊಸ ಸ್ತರಕ್ಕೆ ಹೋಗಿದೆ. ಈ ಸಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ತಮಿಳುನಾಡು ಮೂಲದವರು ಹೀಗಾಗಿ ಭಾರತಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಲಾಗುತ್ತಿದೆ.
ಐಟಿ ಉದ್ಯೋಗಿಗಳಿಗೆ ಮಾರಕವಾಗಿರುವ ಟ್ರಂಪ್ ಆಡಳಿತ ರೂಪಿಸಿರುವ ಕಠಿಣ ಎಚ್- 1 ಬಿ ವೀಸಾ ನಿಯಮ ಬಿಡೆನ್ ಅಧಿಕಾರಕ್ಕೆ ಬಂದರೆ ಸಡಿಲಗೊಳ್ಳುತ್ತದೆ ಎಂದು ಭಾರತದ ಐಟಿ ಉದ್ಯಮ ಆಶಯ ಹೊಂದಿದೆ. ಅಮೆರಿಕದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಭಾರತದ ಮೇಲೆ ಹೆಚ್ಚಿನ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ . ಉಭಯ ದೇಶಗಳ ಮೈತ್ರಿ ದ್ವಿಪಕ್ಷೀಯ, ಬಹುಪಕ್ಷೀಯ, ಪ್ರಾದೇಶಿಕ ಸಂಬಂಧಗಳನ್ನು ಅವಲಂಬಿಸಿವೆ. ಮುಖ್ಯವಾಗಿ ಶಾಂತಿ ಮತ್ತು ಸ್ಥಿರತೆ ಪ್ರಜಾತಂತ್ರ ವ್ಯವಸ್ಥೆ ಬಲಿಷ್ಠಗೊಳಿಸುವುದು, ಉಗ್ರವಾದ ವಿರುದ್ಧ ನಿರಂತರ ಸಮರ ಉಭಯದೇಶಗಳು ಸಮಾನ ಮನಸ್ಕವಾಗಿವೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
