ನವದೆಹಲಿ:ಪ್ರಸಕ್ತ ಬೇಸಿಗೆಯಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ದಾಖಲೆಯ 90,000ಕ್ಕೂ ಅಧಿಕ ವಿದ್ಯಾರ್ಥಿ ವೀಸಾ ಮಂಜೂರು ಮಾಡಲಾಗಿದೆ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
ಜೂನ್​, ಜುಲೈ ಮತ್ತು ಆಗಸ್ಟ್​ ತಿಂಗಳಲ್ಲಿ ವೀಸಾಗಳನ್ನು ವಿತರಿಸಲಾಗಿದ್ದು ಇದು ಭಾರತ ಮತ್ತು ಅಮೆರಿಕ ನಡುವಿನ ಶೈಕ್ಷಣಿಕ ವಿನಿಮಯದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಜಗತ್ತಿನಾದ್ಯಂತ ನೀಡಲಾದ ಒಟ್ಟು ವಿದ್ಯಾರ್ಥಿ ವೀಸಾಗಳಲ್ಲಿ ಭಾರತದಲ್ಲೇ ಕಾಲು ಭಾಗದಷ್ಟು ಮಂಜೂರು ಮಾಡಲಾಗಿದೆ ಎಂದು ರಾಯಭಾರ ಕಚೇರಿ ವಿವರಿಸಿದೆ.
ಎಲ್ಲ ಅರ್ಹ ಅರ್ಜಿದಾರರಿಗೆ ಸಕಾಲದಲ್ಲಿ ವೀಸಾ ಸಿಗುವುದನ್ನು ಖಾತರಿಪಡಿಸಲಾಗಿದೆ ಎಂದು ಎಕ್ಸ್​ನಲ್ಲಿ ಹೇಳಿದೆ. ಕಳೆದ ವರ್ಷ ದಾಖಲೆಯ 1,25,000 ಭಾರತೀಯರಿಗೆ ವಿದ್ಯಾರ್ಥಿ ವೀಸಾ ನೀಡಲಾಗಿದ್ದು, ಬೇರೆ ಯಾವುದೇ ರಾಷ್ಟ್ರೀಯರಿಗಿಂತ ಹೆಚ್ಚಿನ ಸಂಖ್ಯೆ ಇದಾಗಿತ್ತು ಎಂದು ಭಾರತದಲ್ಲಿನ ಕಾನ್ಸುಲರ್​ ವ್ಯವಹಾರಗಳ ಹಂಗಾಮಿ ಸಚಿವ ಬ್ರೆಂಡನ್​ ಮ್ಯುಲ್ಲಾರ್ಕೆ ಜೂನ್​ನಲ್ಲಿ ಹೇಳಿದ್ದರು. ಇದೀಗ ಮೂರು ತಿಂಗಳಲ್ಲೇ 90,000ಕ್ಕೂ ಹೆಚ್ಚು ವೀಸಾ ಮಂಜೂರು ಮಾಡಿರುವುದರಿಂದ ಹೊಸ ದಾಖಲೆ ನಿರ್ಮಿಸಲು ಅಮೆರಿಕ ಸಜ್ಜಾಗಿದೆ. ಪ್ರಸಕ್ತ ಅಕಾಡೆಮಿಕ್​ ವರ್ಷದಲ್ಲಿ ಎರಡು ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
