
ಅಮೆರಿಕ:ಹೆಣ್ಣು ಮಗು ಜನಿಸಿದರೆ ಮೂಗುಮುರಿಯುವ ಕಾಲವಿತ್ತು. ಆದರೆ ಇಂದು ಕಾಲ ಬದಲಾಗಿದೆ.ಇಲ್ಲೊಂದು ಕುಟುಂಬ ಹೆಣ್ಣು ಮಗು ಹುಟ್ಟಿರುವ ಸಂಭ್ರಮವನ್ನು ಆಚರಿಸುತ್ತಿದೆ. ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ 137 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ. 1885ರಿಂದಲೂ ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನಿಸುತ್ತಾ ಬಂದಿದ್ದು, ಇದೀಗ ಹೆಣ್ಣು ಮುಗುವಿನ ಜನನ ಸಂತೋಷ ತಂದಿದೆ.
ಇದನ್ನೂ ಓದಿ:1 ಕೋಟಿ ರೂ. ಬೆಲೆ ಬಾಳುವ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ ನಟ ರಮೇಶ್ ಅರವಿಂದ್
ಕುಟುಂಬದ ಸೊಸೆಯೊಬ್ಬರು ಗರ್ಭಿಣಿಯಾದ ಸುದ್ದಿ ಕೇಳುತ್ತಲೇ, ಬಹುಶಃ ಇದೂ ಗಂಡು ಮಗುವೇ ಆಗಿರಲಿದೆ ಎಂದು ಭಾವಿಸಿದ್ದರು ಕ್ಲಾಸ್ ಕುಟುಂಬಸ್ಥರು. ಈ ಹೆಣ್ಣು ಮಗುವಿನ ಜನನದಿಂದ ಇಡೀ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಈ ಹೆಣ್ಣು ಮಗುವಿಗೆ ಆಡ್ರೇ ಎಂದು ಹೆಸರಿಡಲಾಗಿದೆ. ತನಗೆ ಮಗಳು ಹುಟ್ಟಿದ್ದಾಳೆ ಎಂದು ಖುದ್ದು ಆಕೆಯ ತಾಯಿ ಕೆರೋಲಿನ್ ಕ್ಲಾರ್ಕ್ ಮೊದಲಿಗೆ ನಂಬಿರಲಿಲ್ಲ.
ಇದನ್ನೂ ಓದಿ:ಅಯ್ಯೋ ನನ್ನ ಹೇರ್‌ ಸ್ಟೈಲ್‌ ಚೆನ್ನಾಗಿಲ್ಲ.. ಅಪಾರ್ಟ್‌ಮೆಂಟ್​​​ನಿಂದ ಜಿಗಿದು ಪ್ರಾಣ ಬಿಟ್ಟ!“ನಾನು ಹತ್ತು ವರ್ಷಗಳ ಹಿಂದೆ ಕುಟುಂಬದ ಈ ಇತಿಹಾಸದ ಬಗ್ಗೆ ಮೊದಲ ಬಾರಿಗೆ ಕೇಳಿದ್ದಾಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮೇಲಿಂದ ಮೇಲೆ ಗಂಡು ಮಕ್ಕಳೇ ಜನಿಸುತ್ತಾ ಸಾಗಿದ ಮೇಲೆ ನಂಬಲೇ ಬೇಕಾಯಿತು. ನಮಗೆ ಜನವರಿ 2021ರಲ್ಲಿ ಗರ್ಭಪಾತವಾಗಿತ್ತು. ಇದಾದ 15 ತಿಂಗಳ ಬಳಿಕ ನಾನು ಆಡ್ರೇಗೆ ತಾಯಿಯಾದೆ. ಅವಳು ನಮ್ಮೆಲ್ಲಾ ಕಾಯುವಿಕೆಗೊಂದು ಸಾರ್ಥಕತೆ ತಂದಿದ್ದಾಳೆ. ಅವಳು ನಮ್ಮ ಅದೃಷ್ಟ ದೇವತೆ. ಅವಳ ಅಣ್ಣ ಕ್ಯಾಮರೂನ್ ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದಾನೆ” ಎಂದಿದ್ದಾರೆ ಹೆಣ್ಣು ಮಗುವಿನ ತಾಯಿ ಕೆರೋಲಿನ್.
ಬುಲೆಟ್ ಪ್ರೂಫ್ ‘ನಿಸ್ಸಾನ್’ ಕಾರು ಖರೀದಿಸಿದ ನಟ ಸಲ್ಮಾನ್‌ ಖಾನ್‌
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
