ವಾಷಿಂಗ್ಟನ್​:12 ವರ್ಷಗಳ ಹಿಂದೆ, ಅಂದರೆ 2008ರ ನವೆಂಬರ್​ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಈ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಿದ್ದರೆ, ಇಲ್ಲೊಂದು ಅದ್ಭುತ ಅವಕಾಶ ನಿಮಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಈ ವ್ಯಕ್ತಿಯ ಬಂಧನಕ್ಕೆ ಯಾವುದಾದರೂ ಒಂದು ಪ್ರಮುಖ ಮಾಹಿತಿಯನ್ನು ಕೊಟ್ಟರೆ ನಿಮಗೆ 37 ಕೋಟಿ ರೂಪಾಯಿ ಸಿಗಲಿದೆ.
ಇದನ್ನೂ ಓದಿ:ಪತ್ರಕರ್ತ ಮತ್ತು ಸ್ನೇಹಿತನ ಸಜೀವ ದಹನ; ಮನೆಯೊಳಗೆ ಕೂಡಿ ಹಾಕಿ ಕೊಂದ ಪಾಪಿಗಳು
ಮುಂಬೈ 26/11 ದಾಳಿಯನ್ನು ನಡೆಸಿದ್ದ ಪಾಕಿಸ್ತಾನದ ಲಷ್ಕರ್​ ಇ ತೈಬಾದ 10 ಉಗ್ರರು. ಆದರೆ ಇವರೆನ್ನೆಲ್ಲ ಮೇಲ್ವಿಚಾರಣೆ ಮಾಡಿದ್ದು, ಅವರಿಗೆ ಹೀಗೇ ಮಾಡಬೇಕೆಂದು ಹೇಳಿಕೊಟ್ಟಿದ್ದು ಸಾಜಿದ್​ ಮಿರ್​. ಪ್ರಮುಖ ಭಯೋತ್ಪಾದಕರ ಮಾಹಿತಿ ನಮ್ಮಲ್ಲಿದೆಯಾದರೂ ಸಾಜಿದ್​ ಬಗ್ಗೆ ಮಾತ್ರ ಹೆಚ್ಚಿನ ಮಾಹಿತಿಗಳು ಇಲ್ಲ. ಎಫ್​ಬಿಐನ ಮೋಸ್ಟ್​ ವಾಂಟೆಡ್​ ಟೆರರಿಸ್ಟ್​ಗಳಲ್ಲಿಯೂ ಈತನ ಹೆಸರಿದೆ.
ಇದನ್ನೂ ಓದಿ:ಹಲ್ಲಿನಲ್ಲಿ ಈ ಸಮಸ್ಯೆಯಿದೆಯೇ? ಹಾಗಾದರೆ ಕರೊನಾ ಇರಬಹುದು ಎಚ್ಚರ!
ಮುಂಬೈ ಮಾತ್ರವಲ್ಲದೆ ದೇಶ ವಿದೇಶಗಳ ಅನೇಕ ಸ್ಥಳಗಳಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯ ಹಿಂದೆ ಸಾಜಿದ್​ ಕೈವಾಡವಿದೆ ಎನ್ನಲಾಗಿದೆ. 2011ರಲ್ಲಿಯೇ ಅರೆಸ್ಟ್​ ವಾರೆಂಟ್​ ನೀಡಲಾಗಿದ್ದರೂ ಈವರೆಗೂ ಈತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದೀಗ ಈತನನ್ನು ಬಂಧಿಸಲು ಸಹಾಯವಾಗುವಂತಹ ಮಾಹಿತಿ ನೀಡುವವರಿಗೆ 5 ಮಿಲಿಯನ್​ ಡಾಲರ್​ (37 ಕೋಟಿ ರೂಪಾಯಿ) ಬಹುಮಾನ ಕೊಡುವುದಾಗಿ ಅಮೆರಿಕ ಹೇಳಿದೆ. (ಏಜೆನ್ಸೀಸ್​)
ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 18 =
Remember me
