ಅಹಮದಾಬಾದ್​:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುವುದು ಮೊದಲು ಖಚಿತವಾಗಿರಲಿಲ್ಲ. ಈ ಬಗ್ಗೆ ಹಲವರ ಆಕ್ಷೇಪ ವ್ಯಕ್ತವಾಗಿತ್ತು.
ಆದರೆ ಟ್ರಂಪ್​ ಮತ್ತು ಅವರ ಪತ್ನಿ ಭಾರತಕ್ಕೆ ಆಗಮಿಸಿ ಮೊದಲು ಭೇಟಿ ನೀಡಿದ್ದೇ ಗಾಂಧೀಜಿಯವರ ತತ್ವ, ಆದರ್ಶಗಳ ಬಿಂಬವಾಗಿರುವ ಸಬರಮತಿ ಆಶ್ರಮಕ್ಕೆ. ಏರ್​ಪೋರ್ಟ್​ನಿಂದ ನರೇಂದ್ರ ಮೋದಿ ಹಾಗೂ ಟ್ರಂಪ್​ ಬೇರೆಬೇರೆ ಕಾರಿನಲ್ಲಿ ಹೊರಟು ಅಹಮದಾಬಾದ್​ನ ಸಬರಮತಿ ಆಶ್ರಮವನ್ನು ತಲುಪಿದರು.
ಮೊದಲು ನರೇಂದ್ರ ಮೋದಿಯವರು ಆಶ್ರಮಕ್ಕೆ ತೆರಳಿ, ಮಹಾತ್ಮಾ ಗಾಂಧೀಜಿಯವರಿಗೆ ಗೌರವ ಸಮರ್ಪಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಆಗಮಿಸಿದ ಟ್ರಂಪ್​ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಬಳಿಕ ಡೊನಾಲ್ಡ್​ ಟ್ರಂಪ್​, ಮೆಲಾನಿಯಾ ಟ್ರಂಪ್​ ಮತ್ತು ನರೇಂದ್ರ ಮೋದಿ ಆಶ್ರಮವನ್ನು ಸುತ್ತಾಡಿದರು. ಟ್ರಂಪ್​ ಮತ್ತು ಮೆಲಾನಿಯಾ ಚರಕವನ್ನು ಕುತೂಹಲದಿಂದ ವೀಕ್ಷಿಸಿ ಅದನ್ನು ತಿರುಗಿಸಲೂ ಪ್ರಯತ್ನಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಆಶ್ರಮದ ಹಾಗೂ ಗಾಂಧಿ ತತ್ವಗಳ ಬಗ್ಗೆ ವಿವರಣೆ ನೀಡಿದರು.
ಬಳಿಕ ಮೂವರೂ ಅಲ್ಲಿಯೇ ಇದ್ದ ಕಟ್ಟೆಯ ಮೇಲೆ ಕುಳಿತು ಮಾತುಕತೆ ನಡೆಸಿದರು. ನಂತರ ಟ್ರಂಪ್​ ಹಾಗೂ ಮೆಲಾನಿಯಾ ಅವರು ಸಂದರ್ಶಕರ ಪಟ್ಟಿಯಲ್ಲಿ ತಮ್ಮ ಭೇಟಿಯ ಬಗ್ಗೆ ಬರೆದು ಸಹಿ ಮಾಡಿದರು. (ಏಜೆನ್ಸೀಸ್​)
#WATCHUS President Donald Trump and First Lady Melania Trump spin the Charkha at Sabarmati Ashram. PM Modi also present.#TrumpInIndiapic.twitter.com/TdmCwzU203— ANI (@ANI)February 24, 2020
#WATCHUS President Donald Trump and First Lady Melania Trump spin the Charkha at Sabarmati Ashram. PM Modi also present.#TrumpInIndiapic.twitter.com/TdmCwzU203
US President Donald Trump and First Lady Melania Trump write in the visitor's book at Sabarmati Ashrampic.twitter.com/WtHCddENkA
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 19 =
Remember me
