ನವದೆಹಲಿ: ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು ಪ್ರಣಬ್ ಅವರ ನಿಧನದಿಂದ ಭಾರಿ ದುಃಖಿತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅವರ ಟ್ವೀಟ್​ನ ಸಾರ ಇದು- ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನ ವಾರ್ತೆ ತಿಳಿದು ದುಃಖಿತನಾಗಿದ್ದೇನೆ. ಅವರ ಕುಟುಂಬದವರಿಗೆ ಮತ್ತು ದೊಡ್ಡ ನಾಯಕನೊಬ್ಬನ ನಿಧನದಿಂದ ಅನುಭವಿಸುತ್ತಿರುವ ದುಃಖಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ.
ಇದನ್ನೂ ಓದಿ:ವೇತನ ಪಡೆಯುತ್ತಿಲ್ಲ ರಾಜ್ಯಸಭಾ ಸದಸ್ಯ ಮಾಜಿ ಸಿಜೆಐ ರಂಜನ್ ಗೊಗೋಯ್​ !
ಇದಕ್ಕೂಯುಎಸ್​ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೋಂಪಿಯೋ ಕೂಡ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ದೂರದೃಷ್ಟಿಯುಳ್ಳ ನಾಯಕತ್ವ ಎರಡು ದೇಶಗಳ ಬಾಂಧವ್ಯಕ್ಕೆ ಸಹಕಾರಿಯಾಗಿದ್ದವು ಎಂದು ಅವರ ಕೊಡುಗೆಯನ್ನು ಸ್ಮರಿಸಿ ಸಂತಾಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಯೋಗೀಶ್​ಭಟ್ ವರದಿಗೆ ಸಿಗಲಿದೆಯೇ ಮರುಜೀವ?
ಪ್ರಣಬ್ ಮುಖರ್ಜಿ(84) ಅವರು ಸೋಮವಾರ ಸಂಜೆ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ನಿನ್ನೆ ಅಪರಾಹ್ನ ಲೋಧಿ ರಸ್ತೆಯಲ್ಲಿರುವ ಕ್ರೆಮಟೋರಿಯಂನಲ್ಲಿ ಅಂತ್ಯಸಂಸ್ಕಾರ ನೆರವೇರಿತ್ತು. (ಏಜೆನ್ಸೀಸ್)
VIDEO: ಯೋಗ ಅಂತಹೇಳಿದ್ರೆ ಕುಸ್ತಿ ಅಲ್ಲ, ದೇಹವನ್ನೆಲ್ಲ ಬಗ್ಗಿಸಿ ಮೇಲೆ ಕೆಳಗೆ ಮಾಡುವುದು ಅದಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + five =
Remember me
