ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಭಾರತ ಭೇಟಿ ದಿನ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಚರ್ಚೆ ಜೋರಾಗಿದೆ.
ಕೆಲವರಂತೂ ಮೀಮ್ಸ್​ಗಳನ್ನು, ವಿವಿಧ ವಿಡಿಯೋಗಳನ್ನು ಪೋಸ್ಟ್​ ಮಾಡಿ ಹಾಕುತ್ತಿದ್ದಾರೆ. ಭಾರತ-ಅಮೆರಿಕದ ನಡುವಿನ ಸ್ನೇಹಕ್ಕೆ ಈ ಭೇಟಿ ಸಾಕ್ಷಿ ಎನ್ನುತ್ತಿರುವ ಕೆಲವು ನೆಟ್ಟಿಗರು ತಮ್ಮ ಕೌಶಲಕ್ಕೆ ತಕ್ಕಂತೆ ಟ್ವೀಟ್​, ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ.
ಈ ಮಧ್ಯೆ sol ಎಂಬ ವೆರಿಫೈಡ್​ ಅಲ್ಲದ ಟ್ವಿಟರ್​ ಅಕೌಂಟ್​ವೊಂದು ಬಾಹುಬಲಿ ಸಿನಿಮಾದ ತುಣುಕನ್ನು ಟ್ವೀಟ್ ಮಾಡಿದೆ. ಪ್ರಸಿದ್ಧ ಬಾಹುಬಲಿ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ್ದ ಪ್ರಭಾಸ್​ ಮುಖವಿದ್ದಲ್ಲಿ ಡೊನಾಲ್ಡ್​ ಟ್ರಂಪ್​ ಮುಖವನ್ನು ಅಂಟಿಸಿ, ಎಡಿಟ್​ ಮಾಡಿದ ವಿಡಿಯೋ ಇದಾಗಿದೆ. ಅದರಲ್ಲಿ ಟ್ರಂಪ್​ ಮುಖವುಳ್ಳ ನಾಯಕ ಶತ್ರುಗಳೊಂದಿಗೆ ಹೋರಾಡುವುದು, ಕುದುರೆ ಓಡಿಸುವುದನ್ನು ನೋಡಬಹುದು.
ವಿಡಿಯೋವನ್ನು ಪೋಸ್ಟ್​ ಮಾಡಿದ್ದ sol ನಲ್ಲಿ, ಟ್ರಂಪ್​ ಅವರ ಭಾರತದ ಭೇಟಿಯ ಬಗ್ಗೆ ನನ್ನ ಮನಸಿನಲ್ಲಿ ಏನು ಓಡುತ್ತಿದೆ ಎಂಬುದನ್ನು ಈ ವಿಡಿಯೋ ಮೂಲಕ ತೋರಿಸಿದ್ದೇನೆ ಎಂದು ಕ್ಯಾಪ್ಷನ್​ ಬರೆಯಲಾಗಿತ್ತು. ಎಡಿಟೆಡ್​ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಶೋದಾ ಬೆನ್​, ಟ್ರಂಪ್​ ಪುತ್ರಿ ಇವಾಂಕಾ, ಪತ್ನಿ ಮೆಲಾನಿಯಾ ಕೂಡ ಇದ್ದಾರೆ.
ಇದೇ ವಿಡಿಯೋವನ್ನು ಡೊನಾಲ್ಡ್​ ಟ್ರಂಪ್​ ರೀಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೆ, ಭಾರತದಲ್ಲಿನ ನನ್ನ ಆತ್ಮೀಯ ಸ್ನೇಹಿತರನ್ನು ನೋಡಲು ಕಾತರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಎಡಿಟೆಡ್​ ವಿಡಿಯೋವನ್ನು ಎರಡೂವರೆ ಮಿಲಿಯನ್​​ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಟ್ರಂಪ್​ ರೀಟ್ವೀಟ್​ ಮಾಡಿಕೊಂಡಿರುವ ಪೋಸ್ಟ್​ಗೇ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ. 38 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್​ ಆಗಿದೆ. ಇದರೊಂದಿಗೆ ಪರ-ವಿರೋಧ ಕಾಮೆಂಟ್​ಗಳೂ ಬಂದಿವೆ.(ಏಜೆನ್ಸೀಸ್​)
https://twitter.com/realDonaldTrump/status/1231345462793441280?s=20
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
