ನವದೆಹಲಿ:ಎರಡು ದಿನಗಳ ಭಾರತ ಪ್ರವಾಸದ ಅಂತಿಮ ದಿನವಾದ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್​ ರಾಷ್ಟ್ರಪತಿ ಭವನದ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಟ್ರಂಪ್​ ದಂಪತಿ ಗೌರವಾರ್ಥ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಔತಣಕೂಟ ಏರ್ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಟ್ರಂಪ್​ ದಂಪತಿ ಔತಣಕೂಟದಲ್ಲಿ ಭಾಗಿಯಾಗಿರುವ ಗಣ್ಯರೊಂದಿಗೆ ಹಸ್ತಲಾಘವ ಮಾಡುವುದರೊಂದಿಗೆ ಖುದ್ದಾಗಿ ಪರಿಚಯಿಸಿಕೊಂಡಿದ್ದು ವಿಶೇಷವಾಗಿತ್ತು.
ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​, ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್​ ಮತ್ತು ಹರಿಯಾಣ ಸಿಎಂ ಮನೋಹರ್​ ಲಾಲ್​ ಕಟ್ಟರ್​ ಸೇರಿದಂತೆ ಕೇಂದ್ರದ ಸಚಿವರು ಭಾಗಿಯಾಗಿದ್ದಾರೆ. ಅಲ್ಲದೆ, ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಹಾಗೂ ಪ್ರಸಿದ್ಧ ಶೆಫ್ ವಿಕಾಸ್​ ಖನ್ನಾ ಕೂಡ ಉಪಸ್ಥಿತರಿದ್ದಾರೆ.​
ಇದಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಟ್ರಂಪ್​ ದಂಪತಿಯನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮತ್ತು ಪತ್ನಿ ಸವಿತಾ ಕೋವಿಂದ್​ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಔತಣಕೂಟ ಮುಗಿದ ಬಳಿಕ ಟ್ರಂಪ್​ ದಂಪತಿ ರಾತ್ರಿ 10 ಗಂಟೆಗೆ ಅಮೆರಿಕಗೆ ನಿರ್ಗಮಿಸಲಿದ್ದಾರೆ.(ಏಜೆನ್ಸೀಸ್​)
Delhi: US President Donald Trump and First Lady Melania Trump meet PM Narendra Modi, Vice President M Venkaiah Naidu, Lok Sabha Speaker Om Birla and other Union Ministers, at Rashtrapati Bhawan.pic.twitter.com/2PY2W8NFWI
— ANI (@ANI)February 25, 2020

Delhi: Music composer AR Rahman and chef Vikas Khanna present at the dinner banquet hosted by the President for the US President Donald Trump and First Lady Melania Trump.pic.twitter.com/xrJ2R31UWH
— ANI (@ANI)February 25, 2020

Delhi: US President Donald Trump and First Lady Melania Trump meet Karnataka CM BS Yediyurappa, Telangana CM K. Chandrashekar Rao, Assam CM Sarbananda Sonowal and Haryana CM Manohar Lal Khattar, at the Rashtrapati Bhawan.pic.twitter.com/Q0tlvSe9vr
— ANI (@ANI)February 25, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
