ನವದೆಹಲಿ:ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಫೆಬ್ರವರಿಯಲ್ಲಿ ಸಬರಮತಿ ನದಿ ತೀರಕ್ಕೆ ಭೇಟಿ ನೀಡಲಿದ್ದಾರೆ ಎಂದು ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತಾಡಿದ ರೂಪಾನಿ ಅವರು, ಜಪಾನ್​ ಮತ್ತು ಇಸ್ರೇಲ್​ ಅಧ್ಯಕ್ಷರು ಭೇಟಿ ನೀಡಿದಂತೆ ಸಬರಮತಿ ನದಿ ತೀರವನ್ನು ಟ್ರಂಪ್​ ಕೂಡ ವೀಕ್ಷಿಸಲಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರ ಪರಿಶ್ರಮದಿಂದ ಸಬರಮತಿ ನದಿ ತೀರ ಏಷ್ಯಾದಲ್ಲೇ ಅತಿ ಸ್ವಚ್ಛವಾಗಿರುವ ನದಿ ಎಂದು ಹೆದರಾಗಿದೆ. ಅಲ್ಲಿಗೆ ಭೇಟಿ ನೀಡಿದ್ದ ಜಪಾನ್​ ಮತ್ತು ಇಸ್ರೇಲ್​ ಅಧ್ಯಕ್ಷರು ಆಶ್ಚರ್ಯಚಕಿತರಾಗಿದ್ದರು. ಈಗ ಟ್ರಂಪ್​ ಅವರ ಸರದಿ ಎಂದಿದ್ದಾರೆ.
ಆದರೆ ರೂಪಾನಿ ಅವರು ಟ್ರಂಪ್​ ಫೆಬ್ರವರಿಯಲ್ಲಿ ಭೇಟಿ ನೀಡಲಿದ್ದಾರೆ ಎಂದಿದ್ದಾರೆ ಹೊರತು ಅವರ ಆಗಮನದ ನಿಖರ ದಿನವನ್ನು ತಿಳಿಸಲಿಲ್ಲ. ಈ ಮುಂಚೆ ಅಮೆರಿಕ ಮತ್ತು ಭಾರತೀಯ ಅಧಿಕಾರಿಗಳು ಟ್ರಂಪ್​ ಭಾರತಕ್ಕೆ ಆಗಮಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದರು.
ಈ ಮೊದಲಿನ ವರದಿಗಳ ಪ್ರಕಾರ ಟ್ರಂಪ್​ ಅವರನ್ನು ಗಣರಾಜ್ಯೋತ್ಸವ ಪರೇಡ್​ಗೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಕೇಳಲಾಗಿತ್ತು. ಆದರೆ ಅವರ ದಿನಚರಿಗಳಲ್ಲಿ ಜನವರಿ 24 ರಿಂದ 26 ದಿನಗಳಲ್ಲಿ ಬಿಡುವು ಇರಲಿಲ್ಲ. ಹಾಗಾಗಿ ಅವರ ಭೇಟಿ ಸಾಧ್ಯವಾಗಿರಲಿಲ್ಲ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 18 =
Remember me
