ಆಗ್ರಾ:ಅಹಮದಾಬಾದ್​ನಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್​ಗೆ ಭೇಟಿ ನೀಡಿ ಅಲ್ಲಿನ ವಾಸ್ತುಶಿಲ್ಪವನ್ನು ಟ್ರಂಪ್​ ದಂಪತಿ ಕಣ್ತುಂಬಿಕೊಂಡರು.
ತಾಜ್​ ಮಹಲ್​ ಪ್ರವೇಶಿಸುತ್ತಲೇ ಮೊದಲಿಗೆ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್​ ತಮ್ಮ ಸಂದೇಶವನ್ನು ಹಂಚಿಕೊಂಡರು. ತಾಜ್​ ಮಹಲ್ ಒಂದು​ ವಿಸ್ಮಯವಾಗಿದೆ. ಭಾರತ ಸಂಸ್ಕೃತಿಯಲ್ಲಿನ ವಿವಿಧೆತೆಯ ಸೌಂದರ್ಯ ಮತ್ತು ಶ್ರೀಮಂತಿಕೆಯ ಸಮಯರಹಿತ ಒಡಂಬಡಿಕೆಯಾಗಿದೆ. ಧನ್ಯವಾದ ಭಾರತ ಎಂದು ಟ್ರಂಪ್​ ಬರೆದಿದ್ದಾರೆ.
US President Donald Trump's message in the visitor's book at the Taj Mahal- "Taj Mahal inspires awe, a timeless testament to the rich and diverse beauty of Indian culture! Thank you, India".pic.twitter.com/QtD87OeiYk
— ANI (@ANI)February 24, 2020

ಅಹಮದಾಬಾದ್​ನಿಂದ ಕುಟುಂಬ ಸಮೇತ ತೆರಳಿದ ಟ್ರಂಪ್​ ಸಂಜೆ 4.20ರ ಹೊತ್ತಿಗೆ ಆಗ್ರಾಗೆ ಬಂದಿಳಿದರು. ಈ ವೇಳೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್​ ಮತ್ತು ಮುಖ್ಯಮಂತ್ತಿ ಯೋಗಿ ಆದಿತ್ಯಾ ನಾಥ್​ ಟ್ರಂಪ್​ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಾಂಪ್ರದಾಯಿಕ ಕಲೆಗಳ ಮೂಲಕ ಟ್ರಂಪ್​ ದಂಪತಿಗೆ ಗೌರವ ಸಲ್ಲಿಸಿದರು. ಬಳಿಕ ಕಾರು ಹತ್ತಿ ಟ್ರಂಪ್​ ದಂಪತಿ ತಾಜ್​ ಮಹಲ್​ ಕಡೆ ಹೊರಟರು.
ತಾಜ್​ ಮಹಲ್​ಗೆ ಆಗಮಿಸಿದ ಟ್ರಂಪ್​ ದಂಪತಿಗೆ ಅಚ್ಚರಿಯು ಕಾದಿತ್ತು. ವಿವಿಧ ಕಲಾ ತಂಡಗಳು ಟ್ರಂಪ್​ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಮತ್ತು ಭಾರತ ಬಾವುಟ ಹಿಡಿದು ವಿದ್ಯಾರ್ಥಿಗಳು ಟ್ರಂಪ್​ ದಂಪತಿಯನ್ನು ಖಷಿಯಿಂದಲೇ ಸ್ವಾಗತಿಸಿದರು. ರಸ್ತಯುದ್ದಕ್ಕೂ ಜನ ವಿಶ್ವದ ದೊಡ್ಡಣ್ಣನನ್ನು ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಅಲ್ಲದೆ, ಟ್ರಂಪ್​ ದಂಪತಿ ಸ್ವಾಗತ ಕೋರುವ ಪೋಸ್ಟರ್​ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು.
ಮುಮ್ತಾಜ್​ ಪ್ರೀತಿಯ ನೆನಪಿಗಾಗಿ ಶಹಜಹಾನ್​ ಕಟ್ಟಿಸಿದ ತಾಜ್​ ಮಹಲ್​ ಇತಿಹಾಸವನ್ನು ಹಾಗೂ ಅದರ ವಾಸ್ತು ಶಿಲ್ಪವನ್ನು ಗೈಡ್​ ಮೂಲಕ ಟ್ರಂಪ್​ ದಂಪತಿ ಪರಿಚಯಿಸಿಕೊಂಡರು. ವಿಶೇಷವೆಂದರೆ ಪ್ರತಿಯೊಂದು ಕ್ಷಣವನ್ನು ಟ್ರಂಪ್​ ದಂಪತಿ ಅನುಭವಿಸಿದರು. ಪ್ರೇಮ ಸೌಧದ ಮುಂದೆ ನಿಂತು ಕ್ಯಾಮರಾಗೆ ಪೋಸ್​ ನೀಡಿ ತಮ್ಮ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು.
ಇಷ್ಟೇ ಅಲ್ಲದೆ, ಟ್ರಂಪ್​ ದಂಪತಿ ಪುತ್ರಿ ಇವಾಂಕ ಮತ್ತು ಅಳಿಯ ಜರೇದ್​ ಕುಶ್ನರ್​ ಕೂಡ ತಾಜ್​ ಮಹಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಇದರ ಜತೆಯಲ್ಲೇ ಆಗಮಿಸಿದ್ದ ಅಮೆರಿಕ ನಿಯೋಗವು ಕೂಡ ಪ್ರೇಮಸೌಧದ ಸೌಂದರ್ಯವನ್ನು ಸವಿಯಿತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 2 =
Remember me
