ವಾಷಿಂಗ್ಟನ್​ :ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನವೆಂಬರ್ ಮೊದಲ ಸೋಮವಾರದ ನಂತರ ಬರುವ ಮಂಗಳವಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ಈ ಸಾರಿ ನವೆಂಬರ್ 3ಕ್ಕೆ ಮತದಾನ ಪ್ರಕ್ರಿಯೆ ಮುಗಿಯಲಿದೆ. ಈ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಮತ ಎಣಿಕೆ ಆರಂಭವಾಗುತ್ತದೆ. ಎಣಿಕೆ ಕಾರ್ಯ ಪೂರ್ಣವಾದ ರಾಜ್ಯಗಳು ಫಲಿತಾಂಶ ಪ್ರಕಟಿಸುತ್ತವೆ. ಮತದಾರರು ಮತದಾನದ ದಿನದವರೆಗೂ ಕಾಯಬೇಕು ಎಂಬ ಕಟ್ಟಳೆ ಏನೂ ಇಲ್ಲ. ಸುಮಾರು 24 ಕೋಟಿಗೂ ಹೆಚ್ಚು ಮತದಾರರಲ್ಲಿ 9.30 ಕೋಟಿ ಮಂದಿ ಭೌತಿಕವಾಗಿ ಅಥವಾ ಇ-ಮತಪತ್ರದ ಮೂಲಕ ಈಗಾಗಲೇ ಹಕ್ಕು ಚಲಾಯಿಸಿದ್ದಾರೆ.
ಜನವರಿ 20ರಂದು ನೂತನ ಅಧ್ಯಕ್ಷರ ಪದಗ್ರಹಣ. ಇದು ಭಾನುವಾರ ಬಂದರೆ ಮರುದಿನ ಪ್ರಮಾಣವಚನ ಸಮಾರಂಭ ನಡೆಯುತ್ತದೆ. 130 ವರ್ಷಗಳಿಂದ ಇದೇ ಪದ್ಧತಿ ಅನುಸರಿಸಲಾಗುತ್ತಿದೆ. ಅಮೆರಿಕದ 54 ರಾಜ್ಯ ಮತ್ತು ಅಮೆರಿಕದ ಆಡಳಿತದ ಪ್ರದೇಶಗಳಲ್ಲಿ 538 ಎಲೆಕ್ಟೋರಲ್ ಕಾಲೇಜುಗಳಿವೆ. 270 ಎಲೆಕ್ಟೋರಲ್ ಕಾಲೇಜುಗಳ ಬೆಂಬಲ ಪಡೆದ ಅಭ್ಯರ್ಥಿ ವಿಜೇತ ಎಂಬುದು ಚುನಾವಣಾ ಫಲಿತಾಂಶದ ದಿನವೇ ತಿಳಿಯುತ್ತದೆ.
ಇದನ್ನೂ ಓದಿ:ಬೆಂಗಳೂರಿಗೆ ಜಲಕಂಟಕ: ದೇಶದ 30 ನಗರಗಳಿಗೆ ಕಾದಿದೆ ಗಂಭೀರ ಆಪತ್ತು…
ಅಧ್ಯಕ್ಷೀಯ ಅಭ್ಯರ್ಥಿಗೆ ಡಿ. 14ಕ್ಕೆ ಎಲೆಕ್ಟೋರಲ್​ಗಳಿಂದ ಮತದಾನ: ಜನರಿಂದ ಆಯ್ಕೆಯಾದ ಎಲೆಕ್ಟೋರಲ್ ಕಾಲೇಜ್ ಸದಸ್ಯರು ವಾಗ್ದಾನದಂತೆ ತಮ್ಮ ಅಭ್ಯರ್ಥಿಗೆ ಮತ ನೀಡುವುದು ಸರ್ವೆಸಾಮಾನ್ಯ. ಆದರೆ, ಕೆಲವೊಮ್ಮೆ ಇದನ್ನು ಮೀರಿ ಅಡ್ಡಮತದಾನ ನಡೆಯುತ್ತದೆ. ಈ ಎಲೆಕ್ಟೋರಲ್​ಗಳ ಜತೆಗೆ ಅಮೆರಿಕ ಕಾಂಗ್ರೆಸ್​ನ (ಸಂಸತ್) ಸದಸ್ಯರು ಮತ ಚಲಾವಣೆ ಮಾಡುತ್ತಾರೆ. ಈ ಪ್ರಕ್ರಿಯೆ ಡಿಸೆಂಬರ್​ನ ಎರಡನೇ ಬುಧವಾರದ ನಂತರ ಬರುವ ಸೋಮವಾರ (ಈ ಸಾರಿ ಡಿ. 14) ನಡೆಯತ್ತದೆ. ಇದು ಅಮೆರಿಕ ಅಧ್ಯಕ್ಷರ ಅಧಿಕೃತ ಆಯ್ಕೆಯ ಪ್ರಕ್ರಿಯೆ. ಇದರ ಮತ ಎಣಿಕೆ ಕಾರ್ಯ ಜ. 6ಕ್ಕೆ ನಡೆಯಲಿದೆ.
ಇದನ್ನೂ ಓದಿ:ಹೊಸ ಅಧ್ಯಕ್ಷರ ನಿರೀಕ್ಷೆಯಲ್ಲಿ ಅಮೆರಿಕ: ಇಂದು ಅಂತಿಮ ಮತದಾನ
ಕಣದಲ್ಲಿರುವ ಭಾರತ ಮೂಲದ ಅಮೆರಿಕನ್ನರು:ಇಲಿನಾಯ್ಸ್ 11ನೇ ಜಿಲ್ಲೆಯಿಂದ ಕೃಷ್ಣ ಬನ್ಸಾಲ್ (ರಿಪಬ್ಲಿಕನ್), ಕ್ಯಾಲಿಫೋನಿರ್ಯಾದ 7ನೇ ಜಿಲ್ಲೆಯಿಂದ ಅಮಿ ಬೆರಾ (ಡೆಮಾಕ್ರಟಿಕ್), ಮೈನ್ ಸ್ಟೇಟ್​ನಿಂದ ಸೆನೆಟ್​ಗೆ ಸಾರಾ ಗಿಡಿಯಾನ್ (ಡೆಮಾಕ್ರಟಿಕ್), ವರ್ಜಿನಿಯಾದ 11ನೇ ಜಿಲ್ಲೆಯಿಂದ ಮಂಗಾ ಅನಂತತ್ಮುಲಾ (ಡೆಮಾಕ್ರಟಿಕ್), ವಾಷಿಂಗ್ಟನ್​ನ 7ನೇ ಜಿಲ್ಲೆಯಿಂದ ಪ್ರಮೀಲಾ ಜಯಪಾಲ್ (ಡೆಮಾಕ್ರಟಿಕ್), ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಜಿಲ್ಲೆಯಿಂದ ರೊ ಖನ್ನಾ (ಡೆಮಾಕ್ರಟಿಕ್), ಇಲಿನಾಯ್ಸ್ 8ನೇ ಜಿಲ್ಲೆಯಿಂದ ರಾಜಾ ಕೃಷ್ಣಮೂರ್ತಿ (ಡೆಮಾಕ್ರಟಿಕ್)
ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 : ಸ್ವಿಂಗ್ ಸ್ಟೇಟ್ಸ್ ಅಂದರೇನು? ಈ ಸಲದ ಚುನಾವಣಾ ವಿಷಯಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
