ಕಾಬುಲ್:ಅಫ್ಘಾನಿಸ್ತಾನದ ಬೆಳವಣಿಗೆ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಅಮೆರಿಕದ ಸಿಐಎ ಮುಖ್ಯಸ್ಥ ವಿಲಿಯಮ್ಸ್​ ಬರ್ನ್ಸ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ತಾಲಿಬಾನ್ ಸರ್ಕಾರ ರಚನೆ ಘೋಷಣೆಯಾದ ಬೆನ್ನಲ್ಲೇ ನಡೆದ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಮಾತುಕತೆ ವಿವರಗಳು ಬಹಿರಂಗವಾಗಿಲ್ಲ. ರಷ್ಯನ್ ಪ್ರತಿನಿಧಿ ನಿಕೋಲೈ ಪಟ್ರುಶೇವ್ ಕೂಡ ದೆಹಲಿಯಲ್ಲಿದ್ದು, ಬುಧವಾರ ದೋವಲ್ ಜತೆಗೆ ಮಾತುಕತೆ ನಡೆಸಿದರು. ಈ ಎಲ್ಲ ಮಾತುಕತೆಗಳು ಅಫ್ಘನ್ ಕೇಂದ್ರಿತವಾಗಿದ್ದು, ಭಯೋತ್ಪಾದಕತೆ, ಕಾಶ್ಮೀರದಲ್ಲಿ ಉಗ್ರ ಪ್ರಚೋದನೆ, ಡ್ರಗ್ಸ್ ಕಾರ್ಟೆಲ್ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದಲ್ಲಿನ ಭಾರತದ ರಾಯಭಾರಿ ಡಿಬಿ ವೆಂಕಟೇಶ ವರ್ವ ಪ್ರತಿಕ್ರಿಯೆ ನೀಡಿದ್ದು, ದೋಹಾದಲ್ಲಿ ನಡೆದ ಮಾತುಕತೆ ವೇಳೆ ಭಾರತ ನೇರವಾಗಿ ಭಾಗಿಯಾಗಿರಲಿಲ್ಲ. ಅದರಿಂದ ನಿರೀಕ್ಷಿತ ದೊಡ್ಡ ಫಲವೇನೂ ಇದುವರೆಗೆ ಲಭ್ಯವಾಗಿಲ್ಲ. ಅಫ್ಘಾನಿಸ್ತಾನದ ಮಟ್ಟಿಗೆ ರಷ್ಯಾ ಮತ್ತು ಭಾರತ ಜತೆಗೂಡಿ ಕೆಲಸ ಮಾಡಿದರಷ್ಟೇ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದರು.
ಆತ್ಮಾಹುತಿ ದಳದ ಮುಖ್ಯಸ್ಥತಾಲಿಬಾನ್​ನ ಹೊಸ ಡೆಪ್ಯೂಟಿ ಇಂಟೆಲಿಜೆನ್ಸ್ ಮುಖ್ಯಸ್ಥ ತಾಜ್ ಮಿರ್ ಜಾವೇದ್​ನನ್ನು ಆತ್ಮಾಹುತಿ ದಳದ ಮುಖ್ಯಸ್ಥನೆಂದು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿದೆ. ಈತ ಅನೇಕ ದೇಶಗಳಲ್ಲಿ ಆತ್ಮಾಹುತಿ ಬಾಂಬರ್​ಗಳ ಜಾಲವನ್ನು ಹೊಂದಿದ್ದು, ಅವರ ನಿಯಂತ್ರಣ ಹೊಂದಿದ್ದಾನೆ. ಕಾಬುಲ್​ನಲ್ಲಿನ ಭೀಕರ ಆತ್ಮಾಹುತಿ ದಾಳಿಗಳೆಲ್ಲವೂ ಈತನದ್ದೇ ಕಾರ್ಯಭಾರದಲ್ಲಿ ನಡೆದಿತ್ತು ಎಂದು ಹೇಳಲಾಗುತ್ತಿದೆ.
* ಅಫ್ಘನ್​ನ 1.1 ಕೋಟಿ ಜನರಿಗೆ ನೆರವಾಗುವುದಕ್ಕಾಗಿ ಮುಂದಿನ ನಾಲ್ಕು ತಿಂಗಳ ಮಟ್ಟಿಗೆ ತುರ್ತಾಗಿ 606 ದಶಲಕ್ಷ ಡಾಲರ್ ಅಗತ್ಯವಿದೆ. ಇದಕ್ಕೆ ಸದಸ್ಯ ರಾಷ್ಟ್ರಗಳು ಕೈಜೋಡಿಸಬೇಕು ಎಂದು ವಿಶ್ವಸಂಸ್ಥೆ ಮಂಗಳವಾರ ದಿಢೀರ್ ಮನವಿ ಮಾಡಿದೆ.
* ಭವಿಷ್ಯದಲ್ಲಿ ಎಲ್ಲ ಆಡಳಿತ ಮತ್ತು ಜನಜೀವನ ಷರಿಯಾ ಕಾನೂನು ಪ್ರಕಾರ ನಡೆಯಲಿದೆ. ಹೀಗಾಗಿ. ಪಿಎಚ್​ಡಿ, ಸ್ನಾತಕೋತ್ತರ ಪದವಿಗಳು ಮಾನ್ಯವಲ್ಲ. ತಾಲಿಬಾನ್ ಆಡಳಿತವಾದ ಕಾರಣ ಮುಲ್ಲಾಗಳು ಹೇಳಿದ್ದೇ ಇಲ್ಲಿ ಎಲ್ಲವೂ ಎಂದು ತಾಲಿಬಾನ್​ನ ಹೊಸ ಶಿಕ್ಷಣ ಸಚಿವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್ ಹೇಳಿದ್ದು, ಟೀಕೆಗೊಳಗಾಗಿದೆ.
* ಹಿಜಬ್ ಧರಿಸದ ಮಹಿಳೆಯರು ಕತ್ತರಿಸಿದ ಕಲ್ಲಂಗಡಿ ಹಣ್ಣಿನಂತೆ. ಹಿಜಬ್​ಗೆ ಧಾರ್ವಿುಕ ಮಹತ್ವ ಇದ್ದು, ಅದು ಮಹಿಳೆಯ ತಲೆ, ಕೂದಲು, ಎದೆ ಭಾಗವನ್ನು ಮುಚ್ಚುವುದಲ್ಲದೆ, ಎಲ್ಲ ರೀತಿಯಲ್ಲೂ ರಕ್ಷಣೆ ಒದಗಿಸುತ್ತದೆ ಎಂದು ತಾಲಿಬಾನ್ ನಾಯಕನೊಬ್ಬ ಹೇಳಿದ್ದು ಕೂಡ ಈಗ ಟೀಕೆಗೆ ಒಳ ಗಾಗಿದೆ. ಸಂದರ್ಶನದ ವಿಡಿಯೋ ವೈರಲ್ ಆಗಿದೆ.
* ಅಫ್ಘನ್​ಗೆ ಪರ್ಯಾಯ ಸರ್ಕಾರ ಘೋಷಿಸುವುದಾಗಿ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಬುಧವಾರ ತಿಳಿಸಿದೆ. ಮಂಗಳವಾರ ತಾಲಿಬಾನಿಗಳು ಘೋಷಿಸಿದ ಸರ್ಕಾರಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಅದರಲ್ಲಿ ಉಗ್ರರೇ ತುಂಬಿಕೊಂಡಿದ್ದಾರೆ ಎಂದು ಫ್ರಂಟ್ ಟೀಕಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + sixteen =
Remember me
