ನವದೆಹಲಿ:ಗಲ್ವಾನ್​ ಕಣಿವೆಯಲ್ಲಿನ ಭಾರತ ಮತ್ತು ಚೀನಾ ಯೋಧರ ನಡುವಿನ ಜೂ.15ರ ರಕ್ತಸಿಕ್ತ ಘರ್ಷಣೆಯ ಬಳಿಕ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಅವರಿಗೆ ಅಮೆರಿಕದಿಂದ ಒಂದು ಕರೆ ಬಂದಿತ್ತು. ಅತ್ತಲಿಂದ ಮಾತನಾಡಿದ ಅಮೆರಿಕದ ಗೃಹ ಕಾರ್ಯದರ್ಶಿ ಮೈಕೆಲ್​ ಆರ್​. ಪಾಂಪಿಯೋ ಭಾರತಕ್ಕೆ ಅಮೆರಿಕದ ಸಂಪೂರ್ಣ ಬೆಂಬಲ ಇರುವುದಾಗಿ ಮೌಖಿಕ ಭರವಸೆ ನೀಡಿದ್ದರು ಎನ್ನಲಾಗಿದೆ.
ಲಡಾಖ್​ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ 10 ದಿನಗಳ ಹಿಂದೆ ಬಂದಿದ್ದ ಈ ಕರೆಯ ಮಾಹಿತಿಯನ್ನು ಬಹಿರಂಗಗೊಳಿಸಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಲಡಾಖ್​ ಗಡಿಯಲ್ಲಿ ವಾಯುಸೇನೆಯ ಸಮರ ಕಾರ್ಯಾಚರಣೆ; ಯೋಧರ ಪಡೆ, ಶಸ್ತ್ರಾಸ್ತ್ರಗಳ ರವಾನೆ
ಗಲ್ವಾನ್​ ಘರ್ಷಣೆ ನಡೆದ ಎರಡು ದಿನಗಳ ಬಳಿಕ ಅಂದರೆ ಜೂ.17ರಂದು ಈ ಕುರಿತು ತುಂಬಾ ತಣ್ಣನೆಯ ಆದರೆ ತಟಸ್ಥ ಧ್ವನಿಯಲ್ಲಿ ಪ್ರತಿಕ್ರಿಯಿಸಿದ್ದ ಅಮೆರಿಕ, ನಾವು ಭಾರತ ಮತ್ತು ಚೀನಾ ನಡುವೆ ವಾಸ್ತವ ಗಡಿರೇಖೆ ಬಳಿಕ ಉದ್ಭವಿಸಿರುವ ಅಶಾಂತಿಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಘರ್ಷಣೆಯಲ್ಲಿ 20 ಯೋಧರು ಮಡಿದಿರುವುದಾಗಿ ಭಾರತೀಯ ಸೇನಾಪಡೆ ಹೇಳಿಕೊಂಡಿದೆ. ಮೃತರ ಕುಟುಂಬದವರೆಲ್ಲರಿಗೂ ಸಾಂತ್ವನ ಹೇಳಲು ಬಯಸುತ್ತೇವೆ. ಬಿಕ್ಕಟ್ಟನ್ನು ಪರಿಹರಿಸಿಕೊಂಡು, ಈ ಪ್ರದೇಶದಿಂದ ಸೇನೆಯನ್ನು ಹಿಂಪಡೆಯುವ ಬಗ್ಗೆ ಭಾರತ ಮತ್ತು ಚೀನಾ ಒಲವು ತೋರಿವೆ. ಉಭಯ ರಾಷ್ಟ್ರಗಳು ಈ ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದು ಹೇಳಿತ್ತು.
ಆದರೆ ಕಳೆದ 10 ದಿನಗಳಿಂದ ದಿಢೀರನೆ ತನ್ನ ಧ್ವನಿಯನ್ನು ಎತ್ತರಿಸಿರುವ ಅಮೆರಿಕ, ಲಡಾಖ್​ ಬಿಕ್ಕಟ್ಟಿನ ಕುರಿತು ಭಾರತದ ಬೆನ್ನಿಗೆ ನಿಲ್ಲುವುದಾಗಿ ಹೇಳುತ್ತಿದೆ. ಚೀನಾದ 59 ಆ್ಯಪ್​ಗಳನ್ನು ನಿಷೀಧಿಸುವ ಭಾರತದ ಕ್ರಮವನ್ನು ಸ್ವಾಗತಿಸುವುದಾಗಿ ಸ್ವತಃ ಪಾಂಪಿಯೋ ಜುಲೈ 1ರಂದು ಹೇಳಿಕೆ ನೀಡಿದ್ದರು.ಅಮೆರಿಕದೊಂದಿಗೆ ಭಾರತ ಉತ್ತಮ ಮಿಲಿಟರಿ ಸಹಕಾರ ಹೊಂದಿರುವ ಕಾರಣ, ವಾಸ್ತವ ಗಡಿರೇಖೆಯ ಬಳಿ ಚೀನಾದವರ ಸೇನಾ ನಿಯೋಜನೆ, ಯುದ್ಧೋಪಕರಣಗಳ ಬಳಕೆ ಇತ್ಯಾದಿ ಮಾಹಿತಿಗಳನ್ನು ಅಮೆರಿಕ ಭಾರತಕ್ಕೆ ಒದಗಿಸಿದೆ.
ಅಂತೂ ಬಂತು ಬಿಹಾರ ಮುಖ್ಯಮಂತ್ರಿ ಕರೊನಾ ರಿಸಲ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
