ವಾಷಿಂಗ್ಟನ್​:ಕರೊನಾ ಲಸಿಕೆ ಎಲ್ಲೇ ತಯಾರಾಗಲಿ ಅದು ಅಮೆರಿಕನ್ನರಿಗೆ ಬೇಕೇ ಬೇಕು ಎಂದು ಅಲ್ಲಿನ ಸರ್ಕಾರ ನಿರ್ಧರಿಸಿದಂತಿದೆ. ಹೀಗಾಗಿ ನೂರಾರು ಕೋಟಿ ಡಾಲರ್​ಗಳನ್ನು ಖರ್ಚು ಮಾಡುತ್ತಿದೆ. ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ.
ಅಮೆರಿಕದ್ದೇ ಕಂಪನಿಯಾದ ಮಾಡೆರ್ನಾ ಈಗಾಗಲೇ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಈ ಕಂಪನಿಗೆ ಎಲ್ಲ ರೀತಿಯ ಸಹಾಯವನ್ನು ಅಮೆರಿಕ ನೀಡುತ್ತಿದೆ. ಇದರ ಲಸಿಕೆ ಈಗ ಅಂತಿಮ ಹಂತದ ಕ್ಲಿನಿಕಲ್​ ಟ್ರಯಲ್​ನಲ್ಲಿದೆ.
ಇದನ್ನೂ ಓದಿ;ಆಕ್ಸ್​ಫರ್ಡ್​ ಕರೊನಾ ಲಸಿಕೆ ಯಶಸ್ವಿಯಾದರೆ ಭಾರತಕ್ಕೇನು ಲಾಭ? ಎಲ್ಲಿ ಉತ್ಪಾದನೆಯಾಗುತ್ತೆ ಗೊತ್ತಾ?
ಇನ್ನೊಂದೆಡೆ, ಫೈಝರ್​ ಹಾಗೂ ಜರ್ಮನ್​ ಬಯೋಟೆಕ್​ ಕಂಪನಿ ಬಯಾನ್​ ಟೆಕ್​ ಕಂಪನಿ ಜತೆಗೂ ಲಸಿಕೆ ಖರೀದಿಗೂ ಭಾರಿ ಮೊತ್ತ ವ್ಯಯಿಸುತ್ತಿದೆ. ಒಟ್ಟು 10 ಕೋಟಿ ಡೋಸ್​ ಲಸಿಕೆಯನ್ನು ಪೂರೈಸಲು 14,625 ಕೋಟಿ ರೂ. (1.95 ಬಿಲಿಯನ್​ ಡಾಲರ್​) ಮೊತ್ತದ ಒಪ್ಪಂದ ಮಾಡಿಕೊಂಡಿದೆ.
ಇದರ ಪ್ರಕಾರ ಎರಡೂ ಕಂಪನಿಗಳ ಲಸಿಕೆ ಅಕ್ಟೋಬರ್​ ವೇಳೆಗೆ ಸಿದ್ಧಗೊಳ್ಳಲಿದೆ. ವರ್ಷಾಂತ್ಯಕ್ಕೆ 10 ಕೋಟಿ ಡೋಸ್​ ತಯಾರಿಸಲಿದೆ. ಮುಂದಿನ ವರ್ಷದ ಕೊನೆಯ ಹೊತ್ತಿಗೆ 130 ಕೋಟಿ ಡೋಸ್​ ಉತ್ಪಾದಿಸಲಿದೆ. ಒಪ್ಪಂದ ಪ್ರಕಾರ ಹೆಚ್ಚುವರಿಯಾಗಿ 50 ಕೋಟಿ ಡೋಸ್​ ಖರೀದಿಗೂ ಅವಕಾಶವಿದೆ.
ಇದನ್ನೂ ಓದಿ;ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…?
ಅಮೆರಿಕ ಸರ್ಕಾರದೊಂದಿಗೆ ಒಪ್ಪಮದ ಮಾಡಿಕೊಳ್ಳುತ್ತಿದ್ದಂತೆ ಫೈಝರ್​ ಷೇರುಗಳ ಮೌಲ್ಯ ಶೇ.4 ಹಾಗೂ ಬಯಾನ್​ ಟೆಕ್​ ಸಂಸ್ಥೆಯ ಷೇರುಗಳ ಬೆಲೆ ಶೇ.6 ಏರಿಕೆಯಾಗಿದೆ.
ಆಕ್ಸ್​ಫರ್ಡ ವಿವಿ ಕರೊನಾ ಲಸಿಕೆ ಅರ್ಧದಷ್ಟು ಭಾರತಕ್ಕೆ; ಉತ್ಪಾದಕ ಕಂಪನಿ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eight =
Remember me
