ನವದೆಹಲಿ:ಅಮೆರಿಕದ ವಿಮಾನಗಳು ನೇರವಾಗಿ ಚೀನಾ ಆಗಸದ ಮೇಲೆಯೇ ಹಾರಾಡಿವೆ. ಆ ಮೂಲಕ ಡ್ರ್ಯಾಗನ್​ ರಾಷ್ಟ್ರಕ್ಕೆ ಸವಾಲೊಡ್ಡಿದೆ.
ಚೀನಾದ ಪೀಪಲ್ಸ್​ ಲಿಬರೇಷನ್​​ ಆರ್ಮಿ ದಕ್ಷಿಣ ಚೀನಾ ಸಮುದ್ರದಲ್ಲಿ ಸಮರಾಭ್ಯಾಸದಲ್ಲಿ ನಿರತವಾಗಿರುವಾಗಲೇ ಅಮೆರಿಕದ ಯು- 2 ಗೂಢಚಾರ ವಿಮಾನಗಳು ಚೀನಾದ ಆಗಸದ ಮೇಲೆಯೇ ಹಾರಾಟ ನಡೆಸಿವೆ. ಸತತ ಎರಡನೇ ದಿನವೂ ಇದು ಪುನರಾವರ್ತನೆಯಾಗಿದೆ. ಬುಧವಾರ ಯುಎಸ್​ ಆರ್​ಸಿ-135ಎಸ್​ ವಿಮಾನ ಕೂಡ ಚೀನಾದ ಮೇಲೆ ಹಾರಾಟ ನಡೆಸಿ ಸುರಕ್ಷಿತವಾಗಿ ಮರಳಿದೆ.
ಇದನ್ನೂ ಓದಿ;ಒಝೋನ್​ ಅನಿಲದಿಂದ ನಿಗ್ರಹಿಸಬಹುದು ಕರೊನಾ ವೈರಸ್​; ಜಪಾನ್​ ತಜ್ಞರಿಂದ ಸಂಶೋಧನೆ
ಸಹಜವಾಗಿಯೇ ಇದು ಚೀನಾದ ನಿದ್ದೆಗೆಡಿಸಿದೆ. ಬೇರೆ ದೇಶಗಳ ವಿಮಾನ ತನ್ನ ದೇಶದ ವಾಯು ವ್ಯಾಪ್ತಿಯಲ್ಲಿ ಹಾರಾಟ ನಡೆಸಿ ಮರಳಿದರೂ ಅದಕ್ಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಚೀನಾದ ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಇಲಾಖೆ ಭಾರಿ ಆಕ್ರೋಶ ವ್ಯಕ್ತಪಡಿಸಿವೆ.
ಸಮರಾಭ್ಯಾಸದ ವೇಳೆಯಲ್ಲಿಯೇ ಅಮೆರಿಕದ ವಿಮಾನಗಳು ಚೀನಾದ ಮೇಲೆ ಹಾರಾಟ ನಡೆಸಿದ್ದು, ಸಂಘರ್ಷಕ್ಕೆ ಪ್ರಚೋದನೆಯಾಗಿದೆ. ಜತೆಗೆ, ಇದು ಅಪಘಾತ ಅಥವಾ ಇನ್ನಿತರ ದುರಂತಕ್ಕೆ ಕಾರಣವಾಗಬಲ್ಲುದು ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.
ಪೂರ್ವದಿಂದ ಬಾಷಿ ಕಾಲುವೆ ಮೂಲಕ ಹಾರಾಟ ಆರಂಭಿಸಿದ ಅಮೆರಿಕ ವಿಮಾನ, ದಕ್ಷಿಣ ಚೀನಾ ಸಮುದ್ರದ ಮೂಲಕ ಆ ದೇಶದ ಆಗಸ ಪ್ರವೇಶಿಸಿದೆ. ಬಳಿಕ ಅದೇ ಮಾರ್ಗದಲ್ಲಿ ಸುರಕ್ಷಿತವಾಗಿ ಹಿಂದಿರುಗಿದೆ. ಚೀನಾ ಸೇನೆ ಸಮರಾಭ್ಯಾಸ ನಡೆಸುತ್ತಿದ್ದ ಹೈನಾನ್​ ದ್ವೀಪದ ಬಳಿಯಿಂದಲೇ ಇದು ಚೀನಾಗೆ ಪ್ರವೇಶಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ;ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ
ಅಮೆರಿಕ ವಿಮಾನದ ಅತಿಕ್ರಮ ಪ್ರವೇಶ ಚೀನಾ ಸೇನೆಯ ಸಮರಾಭ್ಯಾಸ ಹಾಗೂ ತರಬೇತಿಗೆ ಭಾರಿ ತೊಂದರೆಯಾಗಿದೆ ಎಂದು ವಿದೇಶಾಂಗ ವಕ್ತಾರ ವು ಕಿಯಾನ್​ ಹೇಳಿದ್ದಾರೆ. ಜತೆಗೆ, ವಿಮಾನವನ್ನು ಹೊಡೆದುರುಳಿಸಬಹುದಾದ ಎಲ್ಲ ಸಾಧ್ಯತೆಗಳಿದ್ದವು ಎಂದು ಹೇಳಿದ್ದಾರೆ. ವಿದೇಶಾಂಗ ಸಚಿವಾಲಯ ತನ್ನ ದೂರನ್ನು ದಾಖಲಿಸಿದೆ.
ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​; ಮೈಸೂರು ಸೇರಿ 17 ಕಡೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
