ವಾಷಿಂಗ್ಟನ್:ಕರೊನಾವೈರಸ್ ಆತಂಕದಿಂದಾಗಿ ಎಲ್ಲ ತರಗತಿಗಳು ಆನ್‌ಲೈನ್‌ಗೆ ವರ್ಗಾಯಿಸಲ್ಪಟ್ಟಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಸೋಮವಾರ ತಿಳಿಸಿದೆ“ಸ್ವದೇಶಿ ಎಫ್​-1 ಮತ್ತು ಎಂ-1 ವಿದ್ಯಾರ್ಥಿಗಳು ಆನ್​ಲೈನ್​​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ಹಾಜರಾಗುತ್ತಿದ್ದರೆ ಅವರು ಪೂರ್ಣ ಪ್ರಮಾಣದ ಕೊರ್ಸ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಮತ್ತು ಅವರು ಅಮೆರಿಕದಲ್ಲೇ ಉಳಿಯಬಹುದು ಎಂದು ಅಮೆರಿಕದ ವಲಸೆ ಮತ್ತು ಸುಂಕ ಜಾರಿ (ಐಸಿಇ) ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಆಸ್ಪತ್ರೆಯ ಹುಳುಕು ತೋರಿಸಿದ್ದೇ ಪ್ರಾಣ ಕಸಿಯಿತೆ? ಪತ್ರಕರ್ತನ ಸಾವಿಗೆ ಟ್ವಿಸ್ಟ್‌
“ಪ್ರಸ್ತುತ ಅಮೆರಿಕದಲ್ಲಿ ಅಂತಹ ಕಾರ್ಯಕ್ರಮಗಳಿಗೆ ಸೇರ್ಪಡೆಗೊಂಡಿರುವ ಸಕ್ರಿಯ ವಿದ್ಯಾರ್ಥಿಗಳು ದೇಶವನ್ನು ತೊರೆಯಬೇಕು ಅಥವಾ ಕಾನೂನುಬದ್ಧವಾಗಿ ಉಳಿಯಲು ಅಧಿಕೃತವಾಗಿ ಶಿಕ್ಷಣ ಸಂಸ್ಥೆಗೆ ವರ್ಗಾವಣೆಗೊಳ್ಳುವಂತಹ ಇತರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರು ವಲಸೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಐಸಿಇ ಹೇಳಿದೆ.ಐಸಿಇ ಪ್ರಕಾರ ಎಫ್ -1 ವಿದ್ಯಾರ್ಥಿಗಳು ಶೈಕ್ಷಣಿಕ ಕೋರ್ಸ್‌ವರ್ಕ್ ಮತ್ತು ಎಂ -1 ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ವರ್ಕ್ ಪೂರೈಸುತ್ತಾರೆ.ಅಮೆರಿಕದ ಹೆಚ್ಚಿನ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಹಿಂಬಾಕಿ ಸೆಮಿಸ್ಟರ್​​ಗಳ ಕುರಿತ ತಮ್ಮ ಯೋಜನೆಗಳನ್ನು ಇನ್ನೂ ಘೋಷಿಸಿಲ್ಲ.ಹಲವಾರು ಶಿಕ್ಷಣ ಸಂಸ್ಥೆಗಳು ವೈಯಕ್ತಿಕ ಮತ್ತು ಆನ್‌ಲೈನ್ ನಂತಹ ಹೈಬ್ರಿಡ್ ಮಾದರಿ ಕುರಿತು ಯೋಜಿಸುತ್ತಿವೆ, ಆದರೆ ಹಾರ್ವರ್ಡ್ ವಿವಿ ಸೇರಿದಂತೆ ಕೆಲವು ವಿವಿಗಳು ತರಗತಿಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದಾಗಿ ಹೇಳಿಕೊಂಡಿವೆ.
ಕರೊನಾ ಹತ್ತಿಕ್ಕಲು ಕನ್ನಡಿಗರಿಂದಲೇ ತಯಾರಾಯ್ತು ಆರು ಉಪಕರಣ- ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
