ಜಾರ್ಜಿಯಾ:ಜೈಲಿನಲ್ಲಿದ್ದ ವ್ಯಕ್ತಿಯನ್ನು ತಿಗಣೆಗಳು ತಿಂದು ಹಾಕುವುದನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಹೌದು! ನಂಬಲು ಅಸಾಧ್ಯವಾದರೂ ಇದು ಸತ್ಯ ಎಂದು ಅಮೆರಿಕದ ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ.
ಅಮೆರಿಕ ದೇಶದ ಜಾರ್ಜಿಯಾ ರಾಜ್ಯದ ಅಟ್ಲಾಂಟಾದಲ್ಲಿ ಜೈಲಿನಲ್ಲಿರುವ ವ್ಯಕ್ತಿಯೊಬ್ಬನನ್ನು ಆತನ ಕೋಣೆಯಲ್ಲಿ ತಿಗಣೆಗಳು ಜೀವಂತವಾಗಿ ತಿಂದು ಹಾಕಿವೆ ಎಂದು ಜೈಲು ಅಧಿಕಾರಿಗಳು ಹೇಳಿದ್ದು ಇದರಿಂದ ಆಘಾತಗೊಂಡಿರುವ ಆತನ ಕುಟುಂಬ ಜೈಲು ಅಧಿಕಾರಿಗಳ ಈ ವಿಚಿತ್ರ ವಿವರಣೆಯನ್ನು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ:ತಿಗಣೆ ಮದ್ದಿಗೆ ಬಲಿಯಾದ್ಲು 6 ವರ್ಷದ ಬಾಲಕಿ; ನಿಜಕ್ಕೂ ಆಗಿದ್ದೇನು? ತಪ್ಪಿತಸ್ಥರು ಯಾರು?
ಜೂನ್ 12 ರಂದು ಅಟ್ಲಾಂಟಾದಲ್ಲಿ ದೈಹಿಕ ಹಲ್ಲೆ ಆರೋಪದ ಮೇಲೆ 35 ವರ್ಷದ ಲಾಶಾನ್ ಥಾಂಪ್ಸನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಗೆ ಮಾನಸಿಕ ಸಮಸ್ಯೆಗಳಿವೆ ಎಂದು ಅಧಿಕಾರಿಗಳು ನಿರ್ಧರಿಸಿದ ನಂತರ ಫುಲ್ಟನ್ ಕೌಂಟಿ ಜೈಲಿನ ಮನೋವೈದ್ಯಕೀಯ ವಿಭಾಗದಲ್ಲಿ ಇರಿಸಲಾಯಿತು. ಆದರೆ ಮೂರು ತಿಂಗಳ ನಂತರ, ಥಾಂಪ್ಸನ್ ಮೃತಪಟ್ಟಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಜೈಲು ಅಧಿಕಾರಿಗಳ ವಿವರಣೆಯೂ ಸಂಶಯಾಸ್ಪದವಾಗಿದೆ.
ಥಾಂಪ್ಸನ್ ಅವರ ವಕೀಲ ಮೈಕೆಲ್ ಡಿ ಹಾರ್ಪರ್, ತಮ್ಮ ಹೇಳಿಕೆಯಲ್ಲಿ ”ತಮ್ಮ ಕಕ್ಷಿದಾರನನ್ನು ಹಾಸಿಗೆ ಹುಳುಗಳು ಮತ್ತು ಕೀಟಗಳು ಜೀವಂತವಾಗಿ ತಿಂದ ನಂತರ ಜೈಲಿನ ಕೋಣೆಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ” ಎಂದು ಹೇಳಿದರು. ಅವರು ಈ ಪ್ರಕರಣವನ್ನು ತಾನು ನೋಡಿದ ಅತ್ಯಂತ ಅಮಾನವೀಯ ಸಾವುಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಅದಲ್ಲದೇ “ಥಾಂಪ್ಸನ್ ವಾಸಿಸುತ್ತಿದ್ದ ಜೈಲು ಕೋಣೆ ಸತ್ತ ಪ್ರಾಣಿಗೂ ಯೋಗ್ಯವಾಗಿರಲಿಲ್ಲ” ಎಂದು ವಕೀಲ ಹಾರ್ಪರ್ ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eight =
Remember me
