ನವದೆಹಲಿ:ನಟನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಬೇಕು ಎಂಬ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಯುವಕನೊಬ್ಬ, ಅತ್ಯಧಿಕ ಸಂಬಳವುಳ್ಳ ತನ್ನ ಕೆಲಸಕ್ಕೆ ಗುಡ್​ಬೈ ಹೇಳಿ ಸ್ವದೇಶಕ್ಕೆ ಹಿಂತಿರುಗಿದ್ದಾನೆ.
ದಿಟ್ಟ ಹೆಜ್ಜೆ ಇಟ್ಟಿರುವ ಯುವಕನ ಹೆಸರು ವಿಕಾಸ್​ ಯಾದವ್​. ಈತ ಕಂಟೆಂಟ್​ ಕ್ರಿಯೆಟರ್​ ಕೂಡ ಹೌದು. ನಟನಾಗಿ ಹೊಸ ಜೀವನ ಆರಂಭಿಸಲು ಅಮೆರಿಕವನ್ನು ತೊರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 2.50 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ತಮ್ಮ ಹಾಸ್ಯಮಯ ವಿಡಿಯೋಗಳಿಂದಲೇ ಯಾದವ್​ ಭಾರೀ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಕನಸಿನ ಬೆನ್ನೇರಿ ಭಾರತಕ್ಕೆ ಬಂದಿರುವ ಯಾದವ್​, ಮೂಲತಃ ದೆಹಲಿಯ ದ್ವಾರಕದವರು. ಇಲ್ಲಿನ ನೇತಾಜಿ ಸುಭಾಸ್​ ಯೂನಿವರ್ಸಿಟಿ ಆಫ್​ ಟೆಕ್ನಾಲಜಿಯಲ್ಲಿ ಮತ್ತು ಲಖನೌ ಐಐಎಂನಲ್ಲಿ ಎಂಬಿಎ ಮುಗಿಸಿರುವ ಯಾದವ್​, ಅಮೆರಿಕ ಮೂಲದ ನಿರ್ವಹಣಾ ಸಲಹಾ ಕಂಪನಿಯ ವಿಶ್ಲೇಷಣೆ ಮತ್ತು ಸಲಹಾ ವಿಭಾಗದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅದಕ್ಕಾಗಿ ಅವರಿಗೆ ಭಾರೀ ಸಂಬಳವನ್ನು ನೀಡಲಾಗುತ್ತಿತ್ತು. ಆದರೆ, ಯಾದವ್​ಗೆ ಕೆಲಸಕ್ಕಿಂತ ನಟನೆ ಮೇಲಿನ ಒಲವು ಜಾಸ್ತಿ ಇತ್ತು. ಅವರ ಮನಸ್ಸು ಯಾವಾಗಲು ನಟನೆಯ ಕಡೆ ತುಡಿಯುತ್ತಿತ್ತು.
ಇದನ್ನೂ ಓದಿ:ಅಂಡರ್​ 21 ಸ್ನೂಕರ್ ವಿಶ್ವ ಚಾಂಪಿಯನ್​ ಶಿಪ್​ ಟೂರ್ನಿಯಲ್ಲಿ ಚಿನ್ನ ಗೆದ್ದ ಕೋಲಾರದ ಯುವತಿಗೆ ಅದ್ಧೂರಿ ಸನ್ಮಾನ
ಕಾರ್ಪೊರೇಟ್​ ಜಗತ್ತಿನಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿದ್ದರೂ ಯಾದವ್​ ಮಾತ್ರ ನಟನೆಯ ಹಿಂದೆ ಸರಿಯಲಿಲ್ಲ. 2015ರಲ್ಲಿ ನಾಲ್ಕು ತಿಂಗಳ ಕಾಲ ರಂಗಮಂದಿರ ವರ್ಕ್​ಶಾಪ್​ನಲ್ಲಿ ಭಾಗವಹಿಸಿದ್ದಾರೆ. ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ. ಸ್ಥಿರ ಮತ್ತು ಒಳ್ಳೆಯ ಸಂಬಳದ ಉದ್ಯೋಗವನ್ನು ಬಿಟ್ಟು ಕೊಡಲು ಯಾರೂ ಇಷ್ಟಪಡುವುದಿಲ್ಲ. ಆದರೆ, ಯಾದವ್​ ಅವರು ತನ್ನ ಕನಸನ್ನು ನನಸು ಮಾಡಿಕೊಳ್ಳಲು ಅದನ್ನು ತೊರೆದಿದ್ದಾರೆ. ಕುಟುಂಬವೂ ಕೂಡ ಯಾದವ್​ಗೆ ಬೆಂಬಲವಾಗಿ ನಿಂತಿದೆ. ಸಂಪೂರ್ಣ ನಟನೆ ಮತ್ತು ಕಂಟೆಂಟ್ ಕ್ರಿಯೆಟಿಂಗ್​ನಲ್ಲಿ ತೊಡಗಿಸಿಕೊಳ್ಳಲು ಭಾರತಕ್ಕೆ ಮರಳಿರುವ ಯಾದವ್​, ಪ್ರತಿಷ್ಠಿತ ಬ್ಯಾರಿ ಜಾನ್ ಆಕ್ಟಿಂಗ್ ಸ್ಟುಡಿಯೋದಲ್ಲಿ ನಟನಾ ಕೋರ್ಸ್‌ಗೆ ಸೇರಿಕೊಂಡಿದ್ದಾರೆ.
ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿರುವ ಯಾದವ್​ ಅವರ ಪತ್ನಿಯು ಸಹ ವಿಕಾಸ್ ಯಾದವ್ ಅವರಿಗೆ ಬೆಂಬಲ ನೀಡಿದ್ದಾರೆ. ಯಾದವ್​ ಅವರಲ್ಲಿ ಸಾಧಿಸುವ ತುಡಿತವಿದೆ. ನಟನೆ ಜತೆ ಕಂಟೆಂಟ್​ ಕ್ರಿಯೆಟಿಂಗ್​ನಲ್ಲೂ ಅವರಿಗೆ ಆಸಕ್ತಿ ಇರುವುದರಿಂದ ನಟನಾ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಾರೆ ಎಂಬ ಒಂದು ಬಲವಾದ ನಂಬಿಕೆ ಅವರಲ್ಲಿ ಮತ್ತು ಅವರ ಕುಟುಂಬದಲ್ಲಿ ಇದೆ. ಏನೇ ಆಗಲಿ ಅತ್ಯಧಿಕ ಸಂಬಳವನ್ನು ಬಿಟ್ಟು ಬರಲು ಎದೆಗಾರಿಕೆ ಬೇಕು. ಆ ನಿರ್ಧಾರವನ್ನು ಯಾದವ್​​ ಅವರು ತೆಗೆದುಕೊಂಡಿದ್ದಾರೆ ಅಂದರೆ ಅವರಲ್ಲಿ ಮನೋಬಲ ಇದೆ ಎಂಬುದು ತಿಳಿಯುತ್ತದೆ. (ಏಜೆನ್ಸಿಸ್​)
ಅಡುಗೆ ಮಾಡುತ್ತಿದ್ದ ಸಹೋದರನ ಪತ್ನಿಯ ಮೇಲೆರಗಿದ ಕಾಮುಕನಿಗೆ 10 ವರ್ಷ ಜೈಲು, 50 ಸಾವಿರ ರೂ. ದಂಡ

ಅಂಡರ್​ 21 ಸ್ನೂಕರ್ ವಿಶ್ವ ಚಾಂಪಿಯನ್​ ಶಿಪ್​ ಟೂರ್ನಿಯಲ್ಲಿ ಚಿನ್ನ ಗೆದ್ದ ಕೋಲಾರದ ಯುವತಿಗೆ ಅದ್ಧೂರಿ ಸನ್ಮಾನ

ಕಾಶ್ಮೀರದಲ್ಲಿ ಭಾರತದ ಮೂವರು ಯೋಧರು ಹುತಾತ್ಮ; ಉಗ್ರರಿಗಾಗಿ ನಡೆಯುತ್ತಿದೆ ತೀವ್ರ ಶೋಧ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 9 =
Remember me
