ನವದೆಹಲಿ: ಗುಜರಾತ್​ನ ಅಹಮದಾಬಾದ್​ನ ಆಸ್ಪತ್ರೆ ಒಂದರಲ್ಲಿ ಧರ್ಮ ಆಧಾರಿತವಾಗಿ ರೋಗಿಗಳನ್ನು ಪ್ರತ್ಯೇಕಿಸಲಾಗಿದೆ ಎಂಬ ದಾರಿ ತಪ್ಪಿಸುವ ಮಾಹಿತಿಯನ್ನು ಆಧರಿಸಿ ಅಮೆರಿಕದ ಕಮಿಷನ್ ಆನ್​ ಇಂಟರ್​ನ್ಯಾಷನಲ್​ ರಿಲೀಜಿಯಸ್​ ಫ್ರೀಡಂ ಪ್ರಕಟಿಸಿರುವ ವರದಿ ಕೂಡ ದಾರಿ ತಪ್ಪಿಸುವಂಥದ್ದೇ ಆಗಿದೆ. ಈ ರೀತಿ ಅರೆಬರೆ ಮಾಹಿತಿ ತಗೊಂಡು ವರದಿ ಪ್ರಕಟಿಸಿ ಜಗತ್ತಿನ ದಾರಿ ತಪ್ಪಿಸುವುದು ಸರಿಯಲ್ಲ ಎಂದು ಅಮೆರಿಕನ್ ಕಮಿಷನ್​ಗೆ ಭಾರತ ಎಚ್ಚರಿಕೆ ನೀಡಿದೆ.
ಯಾವುದೋ ಪತ್ರಿಕೆ ಪ್ರಕಟಿಸಿದ ಸುಳ್ಳು ಸುದ್ದಿಯನ್ನು ಆಧರಿಸಿ ಕಮಿಷನ್​ ವರದಿ ಪ್ರಕಟಿಸಿದೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವಿಚಾರಕ್ಕೆ ಸಂಬಂಧಿಸಿ ಕೇವಲವಾದ ಹೇಳಿಕೆಯನ್ನು ಅದರಲ್ಲಿ ದಾಖಲಿಸಲಾಗಿದೆ. ಯುಎಸ್​ಸಿಐಆರ್​ಎಫ್​ ಈಗ ತಪ್ಪುದಾರಿಗೆ ಎಳೆಯುವ ವರದಿಗಳನ್ನು ಎಲ್ಲೆಡೆ ಪ್ರಸಾರ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಸ್ತವ ಎಚ್ಚರಿಸಿದ್ದಾರೆ.
ಭಾರತದಲ್ಲಿ ಯಾವುದೇ ಆಸ್ಪತ್ರೆಯಲ್ಲೂ ಈ ರೀತಿ ಧರ್ಮದ ಆಧಾರದ ಮೇಲೆ ರೋಗಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುತ್ತಿಲ್ಲ. ವೃತ್ತಿಪರ ವೈದ್ಯಕೀಯ ಮಾರ್ಗಸೂಚಿ ಏನಿದೆಯೋ ಅದರ ಆಧಾರದಲ್ಲೇ ಚಿಕಿತ್ಸೆಗಳು ನಡೆಯುತ್ತಿವೆ. ಭಾರತವು ಈ ಸೋಂಕು ತಡೆಗಟ್ಟಲು ಒಟ್ಟಾಗಿ ಹೋರಾಟ ನಡೆಸುತ್ತಿರುವಾಗ ಅದಕ್ಕೆ ಧರ್ಮದ ಬಣ್ಣ ಹಚ್ಚುವ ಕೆಲಸ ಮಾಡಬಾರದು. ಅಮೆರಿಕನ್ ಕಮಿಷನ್ ಪ್ರತಿಯೊಂದನ್ನು ಧರ್ಮದ ಆಧಾರದಲ್ಲೇ ನೋಡುತ್ತಿದೆ. ಆದರೆ ಇದು ಅದಕ್ಕೆ ಸಕಾಲವಲ್ಲ. ಸೋಂಕು ಹರಡದಂತೆ ತಡೆದು ಜೀವ ಉಳಿಸಿಕೊಳ್ಳಬೇಕಾದ ಸಮಯವಿದು ಎಂದು ಭಾರತ ಎಚ್ಚರಿಸಿದೆ.
ಹಿಂದು ಮತ್ತು ಮುಸ್ಲಿಂ ಎಂದು ಧರ್ಮದ ಆಧಾರದ ಮೇಲೆ ವರ್ಗೀಕರಣ ಮಾಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೆ ಭಾರತದಲ್ಲಿ ಮುಸ್ಲಿಮರು ಮೇಲೆ ಇನ್ನಷ್ಟು ಕೆಟ್ಟ ಅಭಿಪ್ರಾಯ ಮೂಡಬಹುದು. ಅಲ್ಲದೆ, ಅವರ ವಿರುದ್ಧ ಇನ್ನಷ್ಟು ವದಂತಿಗಳು ರೂಮರ್​ಗಳು ಹೆಚ್ಚಾಗಬಹುದು ಎಂಬ ಅಭಿಪ್ರಾಯವನ್ನೂ ಅಮೆರಿಕನ್ ಕಮಿಷನ್​ ವ್ಯಕ್ತಪಡಿಸಿತ್ತು. ಆ ಮೂಲಕ ಅದು ಭಾರತದ ಹೋರಾಟಕ್ಕೆ ಧಾರ್ಮಿಕ ಬಣ್ಣ ಬಳಿಯಲು ಪ್ರಯತ್ನಿಸಿತ್ತು. (ಏಜೆನ್ಸೀಸ್​)
ಲಾಕ್​ಡೌನ್​ ಟೈಂಪಾಸ್​ಗಾಗಿ ಗಂಟೆಗಟ್ಟಲೆ ಮೊಬೈಲ್ ನೋಡುವವರಿಗೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ!

ಮದ್ಯಪ್ರಿಯರಿಗೊಂದು ಖುಷಿಯ ಸುದ್ದಿ- ನೈರೋಬಿಯ ಗವರ್ನರ್​ ಮೈಕ್ ಸೊನ್ಕೋ ಅಂಥವರು ಯಾರಾದರೂ ಭಾರತದಲ್ಲಿ ಇರಬಾರದಿತ್ತಾ? ಅಂತ ಬೇಡಿಕೊಳ್ಳಬೇಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
