ನವದೆಹಲಿ:ವಾಸ್ತವ ಗಡಿರೇಖೆ ಬಳಿ ಚೀನಿಯರು ಹೆಚ್ಚಿನ ಉದ್ಧಟತನ ತೋರಿ, ಪರಿಸ್ಥಿತಿ ಕೈಮೀರುವಂತಿದ್ದರೆ ಯಾವುದೇ ಮುಲಾಜಿಲ್ಲದೆ ಶಸ್ತ್ರಾಸ್ತ್ರಗಳನ್ನು ಬಳಸುವಂತೆ ಸರ್ಕಾರ ಭಾರತೀಯ ಸೇನಾಪಡೆ ಯೋಧರಿಗೆ ಸೂಚನೆ ರವಾನಿಸಿದೆ.
ಗಲ್ವಾನ್​ ನದಿಯ ಬಳಿ ಉಂಟಾದ ಘರ್ಷಣೆಯ ನಂತರದಲ್ಲಿ ಚೀನಾದೊಂದಿಗಿನ ಜಟಾಪಟಿಯ ನಿಯಮಗಳನ್ನು ಬದಲಿಸಿರುವ ಕೇಂದ್ರ ಸರ್ಕಾರ ಪರಿಸ್ಥಿತಿ ತೀರಾ ಕೈಮೀರುತ್ತಿದೆ ಎಂದಾದರೆ, ಶಸ್ತ್ರಾಸ್ತ್ರಗಳ ಬಳಕೆಗೆ ಹಿಂದೆಮುಂದೆ ಆಲೋಚಿಸದಂತೆ ಹೇಳಿದೆ.
ಎಲ್​ಎಸಿ ಬಳಿ ಪರಿಸ್ಥಿತಿಯನ್ನು ಆಧರಿಸಿ ದಾಳಿ ಅಥವಾ ಪ್ರತಿದಾಳಿ ಕೈಗೊಳ್ಳಲು ಭಾರತೀಯ ಸೇನಾಪಡೆಗೆ ಮುಕ್ತ ಅವಕಾಶ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೆನ್ನಲ್ಲೇ ಇಂಥ ಒಂದು ನಿರ್ಧಾರ ಹೊರಬಿದ್ದಿದೆ.
ಇದನ್ನೂ ಓದಿ:ಟೆಂಟ್​ ತೆಗೆಯಿರಿ ಎಂದು ಹೇಳಲು ಹೋದ ಭಾರತೀಯ ಯೋಧರ ಮೇಲೆ ಚೀನಿಯರ ದಾಳಿ
ಲಡಾಖ್​ನ ಪೂರ್ವ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಕೋರ್​ ಕಮಾಂಡರ್​ ಮಟ್ಟದ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ವಿಷಯವೂ ಸೇರಿ ಇನ್ನೂ ಹಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.
1996 ಮತ್ತು 2005ರಲ್ಲಿನ ಒಪ್ಪಂದದ ಪ್ರಕಾರ ಎಲ್​ಎಸಿಯ 2 ಕಿ.ಮೀ. ವ್ಯಾಪ್ತಿಯಲ್ಲಿ ಭಾರತ ಮತ್ತು ಚೀನಾ ಯೋಧರು ಯಾವುದೇ ಸ್ಫೋಟಕಗಳನ್ನಾಗಲಿ ಅಥವಾ ಶಸ್ತ್ರಾಸ್ತ್ರಗಳನ್ನಾಗಲಿ ಬಳಸುವುದಿಲ್ಲ. ಆದರೆ ಅಂದಾಜು 45 ವರ್ಷಗಳ ಬಳಿಕ ಗಲ್ವಾನ್​ ನದಿಯ ಬಳಿ ರಕ್ತಸಿಕ್ತ ಘರ್ಷಣೆ ಉಂಟಾದ ಹಿನ್ನೆಲೆಯಲ್ಲಿ ಭಾರತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ.
ಚೀನಿ ಯೋಧರು ಬಾಲ ಬಿಚ್ಚಿದರೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + twelve =
Remember me
