ನವದೆಹಲಿ:ಕರೊನಾ ವೈರಸ್​ ಭಯದ ನಡುವೆಯೂ ನಾಳೆಯಿಂದ ಸಂಸತ್​ ಅಧಿವೇಶನ ಪ್ರಾರಂಭವಾಗಲಿದೆ. ಕರೊನಾ ಮುನ್ನೆಚ್ಚರಿಕೆಯಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅದರ ಒಂದು ಭಾಗವಾಗಿ ಮಾಧ್ಯಮದವರು ಸಂಸದರು, ಸಚಿವರ ಬೈಟ್​​ (ಹೇಳಿಕೆ)ಗಳನ್ನು ಮೊಬೈಲ್​ಗಳ ಮೂಲಕ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ಸಂಸತ್​ ಭವನದ ಸಂಕೀರ್ಣದ ಒಳಗೆ ಯಾವುದೇ ಮಾಧ್ಯಮದವರು ನೇರ ಪ್ರಸಾರಕ್ಕಾಗಿ ಸಚಿವರು, ಸಂಸದರ ಹೇಳಿಕೆಗಳನ್ನು ಮೊಬೈಲ್​ಗಳ ಮೂಲಕ ತೆಗೆದುಕೊಳ್ಳಬಾರದು ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ. ಮಾಧ್ಯಮಗಳಿಗೂ ಈ ಬಗ್ಗೆ ಹೇಳಲಾಗಿದೆ. ಸಂಕೀರ್ಣದ ಒಳಗೆ ಮೊಬೈಲ್​ ಮೂಲಕ ಬೈಟ್​ ತೆಗೆದುಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗೇ ಮೊಬೈಲ್​ ಕ್ಯಾಮರಾ ಮೂಲಕವೇ ಕೆಲವರು ಲೈವ್​ ಕೊಡುತ್ತಾರೆ. ಈ ಬಾರಿ ಅದಕ್ಕೂ ಅವಕಾಶ ಇಲ್ಲ ಎಂದು ಇಂದು ಹೊರಡಿಸಿದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗೇ ಮಾಧ್ಯಮ ಸಿಬ್ಬಂದಿ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಬೇಕು ಎಂದೂ ಹೇಳಲಾಗಿದೆ.
ಸೋಮವಾರ (ನಾಳೆ) ಬೆಳಗ್ಗೆ 9 ಗಂಟೆಯಿಂದ ಸಂಸತ್​ ಅಧಿವೇಶನ ಪ್ರಾರಂಭವಾಗಲಿದೆ. (ಏಜೆನ್ಸೀಸ್​)
ಗಾಲ್ವಾನ್​ ಸಂಘರ್ಷದಲ್ಲಿ ಹತ್ಯೆಯಾದ ಚೀನಾ ಯೋಧರ ಸಂಖ್ಯೆ 60ಕ್ಕೂ ಹೆಚ್ಚು; ಅಮೆರಿಕ ಮೂಲದಿಂದ ಸತ್ಯ ಬಯಲು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 10 =
Remember me
