ನವದೆಹಲಿ:ದೇಶದ ಆರ್ಥಿಕತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರು ಪ್ರಧಾನಿ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.
ಇದೀಗ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಬಜೆಟ್​ ಕೂಡ ಅನುಪಯುಕ್ತ ಎಂದು ಹೇಳಿರುವ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಮೋದಿಯವರಿಗೆ ಒಂದು ವ್ಯಂಗ್ಯಭರಿತ ಸಲಹೆ ನೀಡಿದ್ದಾರೆ.
ಪ್ರೀತಿಯ ಪ್ರಧಾನಿಯವರೇ, ಆರ್ಥಿಕತೆ ಕುಸಿಯುತ್ತಿದೆ. ಇಡೀ ದೇಶ ನಿಮ್ಮನ್ನು ದೂಷಿಸುತ್ತಿದೆ. ಆ ಆಪಾದನೆಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಬಗ್ಗೆ ನೀವಿಗ ಖಂಡಿತ ಯೋಚನೆ ಮಾಡಬೇಕು. ಇದಕ್ಕೆ ನೀವು ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಬಜೆಟ್​ನ್ನು ಬಳಸಿಕೊಳ್ಳಿ. ನಮಗೆ ಸುಳಿವು ನೀಡದೆ ಇಂತಹ ಬಜೆಟ್​ ಮಂಡಿಸಿದ್ದಾರೆ. ಆರ್ಥಿಕತೆ ಕುಸಿತಕ್ಕೆ ಇದೇ ಕಾರಣ ಎಂದು ಸಂಪೂಣ್ ತಪ್ಪನ್ನು ಅವರ ಮೇಲೆ ಹೊರಿಸಿ. ಸಚಿವಸ್ಥಾನದಿಂದ ಅವರನ್ನು ಕೆಳಗಿಳಿಸಿ. ಆಗ ಸಮಸ್ಯೆ ಪರಿಹಾರ ಆಗುತ್ತದೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿನ ಬಜೆಟ್​ನ್ನು ಕೂಡ ರಾಹುಲ್​ ಗಾಂಧಿ ಟೀಕಿಸಿದ್ದರು. ಅಲ್ಲದೆ ಜಿಎಸ್​ಟಿಯನ್ನು ಗಬ್ಬರ್​ಸಿಂಗ್​ ಟ್ಯಾಕ್ಸ್​ ಎಂದು ವ್ಯಂಗ್ಯವಾಡಿದ್ದರು. ಈ ಬಾರಿಯ ಬಜೆಟ್​ನ್ನು ಕೂಡ ರಾಹುಲ್​ ಗಾಂಧಿ ವಿರೋಧಿಸಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twelve =
Remember me
