ಕೋಲ್ಕತ್ತಾ:ಗಾಯಕಿ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೊ ಉತ್ತುಪ್ (78) ಸೋಮವಾರ ಕೋಲ್ಕತ್ತಾದಲ್ಲಿ ನಿಧನರಾದರು. ರಾತ್ರಿ ಮನೆಯಲ್ಲಿಯೇ ಅವರಿಗೆ ಹೃದಯಾಘಾತವಾಗಿತ್ತು.
ವರದಿಯ ಪ್ರಕಾರ, ಜಾನಿ ಅವರು ಟಿವಿ ನೋಡುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಇಂದು ಜಾನಿ ಚಾಕೊ ಉತ್ತುಪ್ ಅಂತ್ಯಕ್ರಿಯೆ ನಡೆಯಲಿದೆ.
70ರ ದಶಕದಲ್ಲಿ ಟೀ ಪ್ಲಾನ್ಟೇಶನ್​ನಲ್ಲಿ ಜಾನಿ ಚಾಕೊ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರನ್ನು ​ಉಷಾ ಉತ್ತುಪ್​ ಭೇಟಿಯಾದರು. ಬಳಿಕ ಈ ಜೋಡಿ ವಿವಾಹವಾದರು. ಜಾನಿ ಚಾಕೊ ಉತ್ತುಪ್ ಅವರುಉಷಾ ಉತ್ತುಪ್ ಅವರು ತಮ್ಮ ಪುತ್ರ ಸನ್ನಿ ಮತ್ತು ಮಗಳು ಅಂಜಲಿಯನ್ನು ಅಗಲಿದ್ದಾರೆ.
ಅಂಜಲಿ ಉತ್ತುಪ್ ಅವರು ತಮ್ಮ ತಂದೆಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಅಪ್ಪಾ…ತುಂಬಾ ಬೇಗ ಹೋದರು…ಆದರೆ ನೀವು ಬದುಕಿರುವಷ್ಟು ದಿನ ಸೊಗಸಾಗಿ…ಜಗತ್ತಿನ ಅತ್ಯಂತ ಸುಂದರ ವ್ಯಕ್ತಿಯಾಗಿದ್ದೀರ…ನಾವು ನಿಮ್ಮನ್ನು ನಿಜವಾದ ಸಂಭಾವಿತ ವ್ಯಕ್ತಿ ಮತ್ತು ಲಾರೆನ್ಸಿಯನ್ ಟು ದಿ ಕೋರ್ ಮತ್ತು ಫೈನೆಸ್ಟ್ ಟೀ ಟೇಸ್ಟರ್ ಅನ್ನು ಪ್ರೀತಿಸುತ್ತೇವೆ.” ಎಂದು ಬರೆದುಕೊಂಡಿದ್ದಾರೆ.
ವಿರಾಟ್‌ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್‌ ಮೇಲೆ ಎಫ್‌ಐಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
