ಬೆಂಗಳೂರು:ಈರುಳ್ಳಿ ಅಡುಗೆಗೆ ಮಾತ್ರವಲ್ಲ, ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಕೂದಲು ಉದುರುವಿಕೆಗೆ ಈರುಳ್ಳಿ ಉತ್ತಮ ಪರಿಹಾರವಾಗಿದೆ. ಇದನ್ನು ಆಯುರ್ವೇದದಲ್ಲಿ ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಈರುಳ್ಳಿಯಲ್ಲಿರುವ ಸಲ್ಫರ್ ಸಾಮಾನ್ಯವಾಗಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಸಲ್ಫರ್ ರಕ್ತದ ಹರಿವನ್ನು, ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಈರುಳ್ಳಿ ರಸ ತಯಾರಿಸುವುದು ಹೇಗೆ?: ಒಂದು ಈರುಳ್ಳಿಯನ್ನು ಸಿಪ್ಪೆ ಮಾಡಿ ಸಣ್ಣ ತುಂಡುಗಳಾಗಿ ಕತ್ತರಿಸಿ.ಕತ್ತರಿಸಿದ ಈರುಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿ. ಟೀ ಸೋಸುವ ಸೌಟ್​​ಗೆ ಹಾಕಿ ರಸವನ್ನು ಹೊರತೆಗೆದುಕೊಳ್ಳಿ.
1) ಈರುಳ್ಳಿ ರಸ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಅರ್ಧ ಗಂಟೆ ಬಿಡಬೇಕು. ಬಾದಾಮಿ ಎಣ್ಣೆ ಕೂದಲಿಗೆ ಹೊಳಪನ್ನು ನೀಡುತ್ತದೆ. ಇದು ಈರುಳ್ಳಿ ರಸದಿಂದ ನೆತ್ತಿಯನ್ನು ಮೃದುಗೊಳಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ.
2) ಈರುಳ್ಳಿ ರಸ ಮತ್ತು ಆಲಿವ್ ಎಣ್ಣೆ ಕೂಡ ಕೂದಲು ಉದುರುವುದನ್ನು ತಡೆಯುತ್ತದೆ. ಈ ಮಿಶ್ರಣವನ್ನು ತಲೆಯ ಬುಡಕ್ಕೆ ಚೆನ್ನಾಗಿ ಹಚ್ಚಿ, ಮಸಾಜ್ ಮಾಡಿ ಮತ್ತು 30 ನಿಮಿಷಗಳ ಕಾಲ ಬಿಡಿ. ವಾರಕ್ಕೊಮ್ಮೆಯಾದರೂ ಹೀಗೆ ಮಾಡಿ ಮತ್ತು ಉತ್ತಮ ಫಲಿತಾಂಶವನ್ನು ಕಾಣಬಹುದು.
3) ಈರುಳ್ಳಿ ರಸ, ನಿಂಬೆ ರಸ ಕಂಡೀಷನರ್ ಆಗಿಯೂ ಕೆಲಸ ಮಾಡುತ್ತದೆ. ಇದರಿಂದ ಕೂದಲು ಮೃದು ಮತ್ತು ನಯವಾಗಿರುತ್ತದೆ. ಡ್ಯಾಂಡ್ರಫ್ ಕೂಡ ಕಡಿಮೆಯಾಗುತ್ತದೆ.
4) ಈರುಳ್ಳಿ-ಮೊಸರು ಕಾಂಬಿನೇಷನ್ ಕೂಡ ಕೂದಲು ಉದುರುವುದನ್ನು ಕಡಿಮೆ ಮಾಡಿ ಮೃದುವಾಗಿಸುತ್ತದೆ. ಇವೆರಡರ ಮಿಶ್ರಣವನ್ನು ನೆತ್ತಿಯ ಮೇಲೆ ಹಚ್ಚಿ 45 ನಿಮಿಷಗಳ ಕಾಲ ಬಿಡಿ. ಅದರ ನಂತರ ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ.ಮೇಲೆ ತಿಳಿಸಿದಂತೆ ಈರುಳ್ಳಿ ರಸದೊಂದಿಗೆ ನೀವು ಹಲವಾರು ಸಲಹೆಗಳನ್ನು ಪ್ರಯತ್ನಿಸಿದರೆ, ನೀವು ಕೂದಲು ಉದುರುವಿಕೆಯನ್ನು ತಡೆಯಬಹುದು.
ಮದ್ಯ ಪ್ರಿಯರೇ.. ಶವರ್, ಸಿಂಕ್, ವಾಷಿಂಗ್​​ಮೆಷಿನ್ ನೀರಿನಿಂದ ತಯಾರಾಗುತ್ತೆ ಬಿಯರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 6 =
Remember me
