ನವದೆಹಲಿ:ಲೋಕಸಭೆಯ ಸೆಕ್ರೆಟರಿ ಜನರಲ್ ಹುದ್ದೆಗೆ ಹಿರಿಯ ಐಎಎಸ್​ ಅಧಿಕಾರಿ ಉತ್ಪಲ್ ಕುಮಾರ್​ ಸಿಂಗ್​ ಅವರನ್ನು ನೇಮಕ ಮಾಡಿ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ. ಸಿಂಗ್ ಅವರು 1986ರ ಬ್ಯಾಚಿನ ಉತ್ತರಾಖಂಡ ಕೆಡರ್​ನ ಐಎಎಸ್​ ಅಧಿಕಾರಿ.
ಲೋಕಸಭಾ ಸೆಕ್ರೆಟರಿ ಜನರಲ್​ ಹುದ್ದೆಯು ಕ್ಯಾಬಿನೆಟ್ ಸೆಕ್ರೆಟರಿ ಸ್ತರದ ಹುದ್ದೆಯಾಗಿದೆ. ಸಿಂಗ್ ಅವರ ಅವಧಿ ಡಿಸೆಂಬರ್ 1ರಿಂದ ಆರಂಭವಾಗಲಿದೆ. ಸ್ನೇಹಲತಾ ಶ್ರೀವಾಸ್ತವ ಅವರು ಲೋಕಸಭಾ ಸೆಕ್ರೆಟರಿ ಜನರಲ್​ ಆಗಿದ್ದು, ಅವರಿಂದ ತೆರವಾಗುತ್ತಿರುವ ಸ್ಥಾನವನ್ನು ನಾಳೆ ಉತ್ಪಲ್ ಕುಮಾರ್ ಭರ್ತಿ ಮಾಡಲಿದ್ದಾರೆ. ಪ್ರಸ್ತುತ ಉತ್ಪಲ್ ಕುಮಾರ್ ಸಿಂಗ್ ಅವರು ಲೋಕಸಭೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:FACT CHECK | ಅರ್ಚಕರ ಜತೆಗೆ ಚಿರತೆ ಕುಟುಂಬ ಮಲಗುತ್ತಿದ್ದ ವೈರಲ್ ವಿಡಿಯೋದ ನಿಜಾಂಶವೇನು?
ಸಿಂಗ್ ಅವರಿಗೆ 34 ವರ್ಷಗಳ ವೈವಿಧ್ಯಮಯ ಸೇವಾನುಭವವಿದ್ದು, ಕೇಂದ್ರ ಹಾಗೂ ರಾಜ್ಯಗಳ ವಿವಿಧ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ. ಉತ್ತರಾಖಂಡದಲ್ಲಿ ಎರಡೂವರೆ ವರ್ಷ ಮುಖ್ಯಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಕೇಂದ್ರದಲ್ಲಿ ಹೆಚ್ಚುವರಿಯಾಗಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. (ಏಜೆನ್ಸೀಸ್)
ರಜಿನಿ ರಾಜಕೀಯ ಪಕ್ಷದ ಭವಿಷ್ಯ – ಶೀಘ್ರವೇ ತೀರ್ಮಾನ ಪ್ರಕಟಿಸುವೆ ಎಂದ ಸೂಪರ್​ಸ್ಟಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 7 =
Remember me
