ರಾಂಪುರ:ಸಮಾಜವಾದಿ ಪಕ್ಷದ ಸಂಸದ ಮಹಮದ್ ಆಜಂ ಖಾನ್, ಅವರ ಪತ್ನಿ ತಂಜೀನ್ ಫಾತಿಮಾ ಹಾಗೂ ಮಗ ಅಬ್ದುಲ್ಲಾ ಆಜಂ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ಶರಣಾಗಿದ್ದು ಮೂವರನ್ನೂ ಏಳುದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿವಿಧ ಪ್ರಕರಣಗಳ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನೀಡಿದ್ದ ಸಮನ್ಸ್​ಗಳನ್ನು ಖಾನ್ ಕುಟುಂಬ ನಿರ್ಲಕ್ಷಿಸಿದ್ದ ಕಾರಣ ಬಂಧನಕ್ಕೆ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಖಾನ್ ಕುಟುಂಬ ಕೋರ್ಟ್​ಗೆ ಶರಣಾಗಿದೆ. ಶಾಸಕರು ಮತ್ತು ಸಂಸದರ ವಿರುದ್ಧ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್ ಈ ಮೂವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಮಂಗಳವಾರ ಆದೇಶಿಸಿತ್ತು. ನಿರೀಕ್ಷಣಾ ಜಾಮೀನು ಪಡೆಯಲು ಆಜಂ ಖಾನ್ ಕುಟುಂಬ ನಡೆಸಿದ ಪ್ರಯತ್ನ ವಿಫಲವಾಗಿದ್ದವು. ಆಜಂ ಖಾನ್ ಹಾಗೂ ಆತನ ಕುಟುಂಬದವರ ವಿರುದ್ಧ ಕಳೆದ ವರ್ಷ ಜುಲೈನಲ್ಲಿ ನಾಲ್ಕು ಮೊಕದ್ದಮೆಗಳು ದಾಖಲಾಗುವುದರೊಂದಿಗೆ ಸಂಕಷ್ಟ ಆರಂಭವಾಯಿತು.
ಜಮೀನು ಅತಿಕ್ರಮಣ, ವಿದ್ಯುತ್ ಕಳವು, ಮೂರ್ತಿ ಕಳವು ಸಂಬಂಧಿಸಿ ಖಾನ್ ವಿರುದ್ಧ ಪ್ರಕರಣವಿದೆ. ಜನ್ಮ ದಿನಾಂಕ ದಾಖಲೆಗಳನ್ನು ತಿದ್ದಿದ ಆರೋಪದ ಮೇಲೆ ಅಬ್ದುಲ್ಲಾ ಆಜಂ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ. ವಂಚನೆ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನವನ್ನೂ ರದ್ದು ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
