ಲಖನೌ:ಖಾಸಗಿ ಶಾಲೆಗಳಲ್ಲಿ ಶುಲ್ಕಾ ಮನ್ನಾ ಮಾಡಬೇಕು ಎನ್ನುವ ವಿಚಾರದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ. ಮಕ್ಕಳನ್ನು ಹೆರುವವರು ಪೋಷಕರು, ಆದರೆ ಅವರ ಶೈಕ್ಷಣಿಕ ವೆಚ್ಚವನ್ನು ಸರ್ಕಾರ ಭರಿಸಬೇಕೇ ಎಂದು ಅವರು ಪ್ರಶ್ನೆ ಕೇಳಿದ್ದಾರೆ.
ಉತ್ತರ ಪ್ರದೇಶದ ಔರೈಯದಲ್ಲಿ ಭಾನುವಾರದಂದು ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಬಿಜೆಪಿ ಶಾಸಕ ರಮೇಶ್​ ದಿವಾಕರ್​ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ನೀವುಗಳು ಮಕ್ಕಳನ್ನು ಮಾಡಿಕೊಳ್ಳುತ್ತೀರಿ, ಆದರೆ ಸರ್ಕಾರ ಅವರ ಶೈಕ್ಷಣಿಕ ವೆಚ್ಚವನ್ನು ಭರಿಸಲಿ ಎನ್ನುತ್ತೀರಲ್ಲಾ ಎಂದು ಅವರು ಕೇಳಿದ್ದಾರೆ. ಹಾಗೊಂದು ವೇಳೆ ನಿಮಗೆ ಖಾಸಗಿ ಶಾಲೆಗಳ ವೆಚ್ಚ ಭರಿಸಲು ಸಾಧ್ಯವಾಗಲಿಲ್ಲವೆಂದಾದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಅವರು ಹೇಳಿದ್ದಾರೆ.
ಅವರ ಈ ಮಾತಿನ ತುಣುಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಹೇಳಿಕೆಯ ವಿರುದ್ಧ ವಿರೋಧ ಪಕ್ಷದ ಅನೇಕ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮಹಿಳಾ ವಿರೋಧಿ ಪಕ್ಷ, ಮಹಿಳೆಯರ ಬೇಡಿಕೆಗೆ ಈ ರೀತಿಯ ಅಸಡ್ಡೆಯ ಉತ್ತರವನ್ನು ಪಕ್ಷದ ನಾಯಕ ನೀಡಿದ್ದಾರೆ. ಮಹಿಳೆಯರಿಗೆ ಗೌರವ ಕೊಡಲಾಗುತ್ತಿಲ್ಲ ಎಂದು ಸಮಾಜವಾದಿ ಪಕ್ಷ ದೂರಿದೆ. (ಏಜೆನ್ಸೀಸ್​)
ಗಂಡ ಮನೆಯಲ್ಲಿ ಇಲ್ಲವೆಂದು ಪ್ರಿಯತಮನನ್ನು ಕರೆಸಿಕೊಂಡ ಹೆಂಡತಿ! ಅಮೇಲಾಗಿದ್ದು ಏನು ಗೊತ್ತಾ?

1.1 ಲಕ್ಷ ರೂಪಾಯಿಯ ಆ್ಯಪಲ್​ ಐಫೋನ್​ ಆರ್ಡರ್​ ಮಾಡಿದವಳಿಗೆ ಬಂದಿದ್ದು ಆ್ಯಪಲ್​ ಜ್ಯೂಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 18 =
Remember me
