ಲಖನೌ:ಸಂಜೆ ಹೊತ್ತು ಬಿಸಿ ಬಿಸಿ ಚಾಟ್​ ತಿನ್ನಲೆಂದು ಚಾಟ್​ ಸ್ಟ್ರೀಟ್​ಗಿಳಿಯುವ ಗ್ರಾಹಕರ ಸಂಬಂಧವೇ ಎರಡು ಅಂಗಡಿಗಳು ಕಿತ್ತಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್​ ಜಿಲ್ಲೆಯಲ್ಲಿ ನಡೆದಿದೆ. ಅಂಗಡಿ ಕಾರ್ಮಿಕರ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ.
ಬಾಗ್ಪತ್​ ಜಿಲ್ಲೆಯ ಬರಾತ್ ಪಟ್ಟಣದ ಅತಿಥಿ ಭವನ ಮಾರುಕಟ್ಟೆಯಲ್ಲಿ ಕಿತ್ತಾಟ ನಡೆದಿದೆ. ಒಂದು ಅಂಗಡಿಗೆ ಹೋಗಬೇಕಿದ್ದ ಗ್ರಾಹಕರನ್ನು ಇನ್ನೊಂದು ಅಂಗಡಿಯವರು ಸೆಳೆದರು ಎನ್ನುವ ಕಾರಣಕ್ಕೆ ಕಿತ್ತಾಟ ಆಗಿರುವುದಾಗಿ ಹೇಳಲಾಗಿದೆ. ಸುಮಾರು 20 ನಿಮಿಷಗಳ ಕಾಲ ಎರಡೂ ಅಂಗಡಿಯ ಕಾರ್ಮಿಕರು ಕೋಲಿನಲ್ಲಿ ಹೊಡೆದಾಡಿಕೊಂಡಿದ್ದಾರೆ. ಸ್ಥಳೀಯರೊಬ್ಬರು ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಬಿಟ್ಟಿದ್ದಾರೆ.
ಈ ಕಿತ್ತಾಟದಲ್ಲಿ 12 ಮಂದಿಗೆ ಗಾಯವಾಗಿದೆ. ಯಾರಿಗೂ ಗಂಭೀರ ಗಾಯವೇನು ಆಗಿಲ್ಲ. ಪ್ರಕರಣದ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಗಪತ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಚಾಟ್​ ಸ್ಟಾಲ್​ ಫೈಟ್​!ಉತ್ತರ ಪ್ರದೇಶದ ಬಾಗ್ಪತ್​ ಜಿಲ್ಲೆಯ ಬರಾತ್ ಪಟ್ಟಣದಲ್ಲಿ ಎರಡು ಚಾಟ್​ ಸ್ಟಾಲ್​ಗಳ ಕೋಲು ಹಿಡಿದು ಕಿತ್ತಾಡಿರುವ ದೃಶ್ಯವಿದು.. ನಮ್ಮ ಅಂಗಡಿಗೆ ಬರುವ ಗ್ರಾಹಕರನ್ನು ನೀವ್ಯಾಕೆ ಕರೆದುಕೊಂಡಿರಿ ಎಂದು ಶುರುವಾದ ಜಗಳ ಈ ರೂಪ ತಾಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕಿತ್ತಾಟದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ.pic.twitter.com/fIFEby309J
— Vijayavani (@VVani4U)February 22, 2021

ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ, ಪ್ರಾಧಿಕಾರ ರಚನೆ: ಸಿಎಂಗೆ ಆದಿಚುಂಚನಗಿರಿ ಶ್ರೀಗಳ ಪತ್ರ

ಶಾಲಾ ಬಸ್ಸು ಹತ್ತಲು ಹೋದವಳ ಮುಂದೆ ಪ್ರತ್ಯಕ್ಷವಾದ ಹುಲಿ! ಸ್ಥಳದಲ್ಲೇ ಕುಸಿದು ಬಿದ್ದ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 12 =
Remember me
