ಲಖನೌ:ದೇಶಾದ್ಯಂತ ಕರೊನಾ ಎರಡನೇ ಅಲೆ ದಿನೇದಿನೆ ಹೆಚ್ಚಾಗುತ್ತಿದೆ. ಕೋವಿಡ್​-19ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಸಿಕೆ ಪಡೆಯುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಮೊದಲ ಡೋಸ್​ ಲಸಿಕೆ ಪಡೆಯುವ ಮೂಲಕ ಜನರನ್ನು ಹುರಿದುಂಬಿಸಿದ್ದಾರೆ.
ಇಂದು (ಏಪ್ರಿಲ್​ 05) ಬೆಳಗ್ಗೆ ರಾಜಧಾನಿ ಲಖನೌದ ಸಿವಿಲ್​ ಆಸ್ಪತ್ರೆಯಲ್ಲಿ ಸಿಎಂ ಯೋಗಿ ಲಸಿಕೆಯನ್ನು ಪಡೆದುಕೊಂಡರು. ಬಳಿಕ ಮಾತನಾಡಿ ಅವರು ಲಸಿಕೆ ಪಡೆದುಕೊಂಡು ಬಳಿಕವು ಜನರು ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ವಹಿಸಿ ಎಂದು ಮನವಿ ಮಾಡಿದರು.
ಇದನ್ನೂ ಓದಿರಿ:Web Exclusive | ಪ್ರತಿಧ್ವನಿಸಿದ ಬಂಡೀಪುರ ರಾತ್ರಿ ಸಂಚಾರ ನಿಷೇಧ; ತಮಿಳುನಾಡು ಚುನಾವಣೆಯಲ್ಲಿ ಅಸ್ತ್ರವಾಗಿ ಬಳಕೆ..
ಲಸಿಕೆಯನ್ನು ಉಚಿತವಾಗಿ ನೀಡಿದ್ದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಿಎಂ ಯೋಗಿ ಇದೇ ವೇಳೆ ಧನ್ಯವಾದ ತಿಳಿಸಿದರು. ಅಲ್ಲದೆ, ದೇಶದ ವಿಜ್ಞಾನಿಗಳಿಗೂ ಧನ್ಯವಾದ ಅರ್ಪಿಸಿದರು.
ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ನಮ್ಮ ಆಯ್ಕೆ ಬಂದಾಗ ನಾವೆಲ್ಲ ಖಂಡಿತವಾಗಿ ಲಸಿಕೆ ತೆಗೆದುಕೊಳ್ಳೋಣ ಎಂದು ಜನರನ್ನು ಯೋಗಿ ಹುರಿದುಂಬಿಸಿದರು.(ಏಜೆನ್ಸೀಸ್​)
#WATCH| Uttar Pradesh CM Yogi Adityanath receives first dose of COVID-19 vaccine at Civil Hospital, Lucknowpic.twitter.com/MwpMAUca7K
— ANI UP/Uttarakhand (@ANINewsUP)April 5, 2021

ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ​! ವೈದ್ಯರ ಮುಂದೆ 6 ತಿಂಗಳ ಹಿಂದಿನ ನಿಜ ಸಂಗತಿ ಬಿಚ್ಚಿಟ್ಟ ಮಹಿಳೆ

ಸದಾ ಲೋಕಹಿತನಿರತ ಗುರು ಗ್ರಹ ಇಂದು ಕುಂಭಕ್ಕೆ ಪ್ರವೇಶ

ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಮಹಾರಾಷ್ಟ್ರ ನಂ.1, ಯುಪಿಗೆ 2ನೇ ಸ್ಥಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twenty =
Remember me
