ಉತ್ತರಪ್ರದೇಶ:ಕುಡಿದು ಮನೆಗೆ ಬಂದು ಜಗಳ ಮಾಡುತ್ತಿದ್ದ ಪತಿಯನ್ನು ಪತ್ನಿ ಪ್ರಶ್ನೆ ಮಾಡಿದ್ದಕ್ಕೆ ಕುಡಿದ ನಶೆಯಲ್ಲಿದ್ದ ಪತಿ ಮೂರನೇ ಮಹಡಿಯಿಂದ ಪತ್ನಿಯನ್ನು ಎತ್ತಿ ಕಳೆಕ್ಕೆ ಎಸೆದಿದ್ದಾನೆ. ತಕ್ಷಣ ಪತ್ನಿಯನ್ನು ತಕ್ಷಣ ಆಸ್ಪತ್ರೆ ದಾಖಲಿಸಿದ್ದರೂ ಬದುಕಿ ಉಳಿಯಲಿಲ್ಲ. ಈ ಭೀಕರ ಘಟನೆ ಉತ್ತರ ಪ್ರದೇಶದ ಗೋವಿಂದಪುರದಲ್ಲಿ ನಡೆದಿದೆ.
ಇದನ್ನೂ ಓದಿ:ಜಗದೀಶ್ ಶೆಟ್ಟರ್​ಗೆ ಲೋಕಸಭಾ ಟಿಕೆಟ್ ಫಿಕ್ಸ್​? ಎಂ.ಪಿ. ರೇಣುಕಾಚಾರ್ಯ ಕೊಟ್ಟ ಉತ್ತರವಿದು!
ಮೂರನೇ ಮಹಡಿಯಿಂದ ಅವಳನ್ನು ಎಸೆದ ನಂತರ, ಅವರು ಪತ್ನಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಸಹಾಯಕ ಪೊಲೀಸ್ ಆಯುಕ್ತ ಅಭಿಷೇಕ್ ಶ್ರೀವಾಸ್ತವ್ ಹೇಳಿದ್ದಾರೆ.
ಕಂಠಪೂರ್ತಿ ಕುಡಿಯುತ್ತಿದ್ದರೆ ಮನೆಗೆ ಬರುವುದೇ ಬೇಡ ಎಂದು ಪತ್ನಿ ಸಾಕಷ್ಟು ಸಲ ಹೇಳಿದ್ದಾಳೆ. ಮೊದಲೇ ರೊಚ್ಚಿಗೆದ್ದಿದ್ದ ಪತ್ನಿ ನನ್ನ ಮನೆಗೆ ಬರಬೇಡ ಎಂದು ಹೇಳುತ್ತಿಯಾ ಎಂದು ಧರಧರನೆ ಪತ್ನಿಯನ್ನು ಎಳೆದುಕೊಂಡು ಹೊರತಂದ ಪತಿ, ವರಾಂಡದಿಂದ ಎತ್ತಿ ಕೆಳಕ್ಕೆ ಎಸೆದಿದ್ದಾನೆ. ಮೂರೇ ಮಹಡಿಯಿಂದ ಕೆಳಕ್ಕೆ ಬಿದ್ದ ಪತ್ನಿಗೆ ತೀವ್ರ ಗಾಯವಾಗಿದೆ. ವಿಕಾಸ್ ಕುಮಾರ್ ಕೂಡ ಪತ್ನಿಯನ್ನು ಆಸ್ಪತ್ರೆ ಸಾಗಿಸಲು ನೆರವು ನೀಡಿದ್ದಾನೆ ಎನ್ನಲಾಗಿದೆ.
ಆಸ್ಪತ್ರೆಗೆ ಬಂದ ಬೆನ್ನಲ್ಲೇ ವೈದ್ಯರು ತಪಾಸಣೆ ನಡೆಸಿ ಮಹಿಳೆ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ್ದಾರೆ. ಇಷ್ಟೇ ಅಲ್ಲ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಆಗಮಿಸುವ ಮೊದಲೇ ವಿಕಾಸ್ ಕುಮಾರ್ ಪರಾರಿಯಾಗಿದ್ದಾನೆ.
ಕುಮಾರ್ ವಿರುದ್ಧ ಕೊಲೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಅವರನ್ನು ಶನಿವಾರ ಜೈಲಿಗೆ ಕಳುಹಿಸಲಾಗಿದೆ. ಅಷ್ಟರಲ್ಲಿ ಕುಡಿದ ಮತ್ತೆಲ್ಲಾ ಇಳಿದು ಹೋಗಿದೆ. ಇದೀಗ ಜೈಲು ಸೇರಿರುವ ಆರೋಪಿ ವಿಕಾಸ್ ಕುಮಾರ್ ಪರಿತಪಿಸುತ್ತಿದ್ದಾನೆ.
ಜನರತ್ತ ಕೈ ಬೀಸುವ ವ್ಯಕ್ತಿ ರಾಹುಲ್​ ಗಾಂಧಿ ಅಲ್ಲ, ರಾಹುಲ್​ನಂತೆ ಕಾಣುವ ‘ಡ್ಯೂಪ್​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
