ಉತ್ತರಪ್ರದೇಶ:ಗೂಳಿಯೊಂದು ರೈತನಿಗೆ ಬೆದರಿಕೆ ಹಾಕಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಇರಿಯಲು ಗೂಳಿಯೊಂದು ಓಡಿ ಬಂದಾಗ ಎಚ್ಚೆತ್ತ ರೈತ ಅದರಿಂದ ಪ್ರಾಣ ಉಳಿಸಿಕೊಳ್ಳಲು ಮರಕ್ಕೆ ಜಿಗಿದಿದ್ದಾನೆ.  ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:3 ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಹಾರಿ ಸಾವಿಗೆ ಶರಣು…
ಬಲ್ಲಿಯಾ ಜಿಲ್ಲೆಯ ರಾಸ್ದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೂಳಿಗೆ ಏನಾಯಿತು ಎಂಬುದು ತಿಳಿದಿಲ್ಲ, ಆದರೆ ಇದುವರೆಗೆ 12 ಜನರನ್ನು ಗಾಯಗೊಳಿಸಿದೆ. ಆದರೆ ಇದೀಗ ಮತ್ತೊಬ್ಬನ್ನು ಗುರಿಯಾಗಿಸಿಕೊಂಡು ಮಾಡಿದ ಅವಾಂತರದ ವಿಡಿಯೋ ವೈರಲ್​​ ಆಗಿದೆ.
ಇದನ್ನೂ ಓದಿ:ಅಮೆಜಾನ್ ಕೊಟ್ಟ ಅದೃಷ್ಟ; ಆರ್ಡರ್ ಮಾಡದೆ ಮನೆ ಬಾಗಿಲಿಗೆ ಬಂದವು 100 ಪಾರ್ಸೆಲ್!
ಗೂಳಿ ಜು.28ರಂದು ಖಖ್ನು ಎಂಬ ರೈತನನ್ನು ಅಟ್ಟಿಸಿಕೊಂಡು ಹೋಗಿದೆ. ತಪ್ಪಿಸಿಕೊಳ್ಳಲು ರೈತ ಓಡಿ ಹೋಗಿ ರಸ್ತೆಬದಿಯ ಮರ ಹತ್ತಿದ. ಅವನನ್ನು ಬಿಟ್ಟು ಹೋಗುವುದಿಲ್ಲ ಎಂಬಂತೆ ಅವನು ಯಾವಾಗ ಮರದಿಂದ ಇಳಿಯುತ್ತಾನೆ ಎಂದನ್ನು ಗೂಳಿ ನೋಡುತ್ತಾ ಬರೋಬ್ಬರಿ 2 ಗಂಟೆಗಳ ಕಾಲ ಅಲ್ಲೇ ಕಾದು ನಿಂತಿದೆ.ಗೂಳಿಯ ಭಯದಿಂದ ಗಂಟೆಗಳ ಕಾಲ ಮರದ ಮೇಲೆ ಕುಳಿತಿದ್ದನು. ನಂತರ ಅಲ್ಲೇ ಹತ್ತಿರದಲ್ಲಿದ್ದ ರೈತರು ಬಂದು ಆತನನ್ನು ಕಾಪಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
बलिया में आवारा सांड से जान बचाने के लिए एक किसान करीब 2 घंटे तक पेड़ पर बैठा रहा, वीडियो वायरल होने के बाद डीएम ने संज्ञान लिया!!#Ballia#UttarPradeshpic.twitter.com/5LpQqUNHnW
— Gaurav Dixit (@GauravKSD)July 28, 2023

ಈ ವಿಚಿತ್ರ ಘಟನೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಖ್ ಯಾದವ್, ಗೂಳಿಗಳನ್ನು ತಡೆಯಲು ಸರ್ಕಾರ ಕ್ರಮಕೈಗೊಳ್ಳಬೇಕು. ಈ ಪ್ರದೇಶದಲ್ಲಿ ಇದುವರೆಗೆ 3,910 ಬಿಡಾಡಿ ಹೋರಿಗಳನ್ನು ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ ರೈತನನ್ನು ಹೆದರಿಸಿದ ಗೂಳಿಯನ್ನು ಹಿಡಿದು ಆರೈಕೆ ಕೇಂದ್ರಕ್ಕೆ ಕೊಂಡೊಯ್ಯಲು ತಂಡವೊಂದು ಈಗಾಗಲೇ ಸ್ಥಳಕ್ಕೆ ಹೋಗಿದ್ದಾರೆ. ಗೂಳಿಗಳನ್ನು ನಿಯಂತ್ರಣದಲ್ಲಿಡಲು ಗೂಳಿ ರಕ್ಷಣಾ ವಿಭಾಗವನ್ನು ಸ್ಥಾಪಿಸುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಅಕ್ರಮ ಅಸ್ತಿ ಪ್ರಕರಣದಲ್ಲಿ ಡಿಕೆಶಿಗೆ ಬಿಗ್ ರಿಲೀಫ್; ಹೈಕೋರ್ಟ್ ಆದೇಶದಲ್ಲಿ ಸದ್ಯ ಮಧ್ಯಪ್ರವೇಶ ಮಾಡೋದಿಲ್ಲವೆಂದ ಸುಪ್ರೀಂಕೋರ್ಟ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − 2 =
Remember me
