ಲಖನೌ:ಒಂದು ಮಗು ಬೆಳೆದು ದೊಡ್ಡದಾಗುವವರೆಗೂ ಪಾಲಕರು ಎಷ್ಟು ಎಚ್ಚರಿಕೆ ವಹಿಸುತ್ತಾರೋ ಅಷ್ಟೇ ಎಚ್ಚರಿಕೆಯನ್ನು ರೈತ ತನ್ನ ಬೆಳೆಯ ಮೇಲೆ ಇಟ್ಟಿರುತ್ತಾನೆ. ಜೀವನಕ್ಕೆ ಆಧಾರವಾದ ಬೆಳೆಯನ್ನು ಉಳಿಸಿಕೊಳ್ಳಲು ಎದುರಾಗುವ ಎಲ್ಲ ಅಡೆ-ತಡೆಗಳನ್ನು ರೈತ ಹೇಗೆ ಎದುರಿಸುತ್ತಾನೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ.
ಉತ್ತರ ಪ್ರದೇಶ ಲಖಿಂಪುರ್​ ಖೇರಿ ಜಿಲ್ಲೆಯ ಜಹಾನ್​ ನಗರ ಗ್ರಾಮದ ಯುವ ರೈತನೊಬ್ಬ ತನ್ನ ಕಬ್ಬಿನ ಬೆಳೆಯನ್ನು ಕೋತಿಗಳ ಹಾವಳಿಯಿಂದ ಕಾಪಾಡಿಕೊಳ್ಳಲು ಕರಡಿ ವೇಷ ಧರಿಸಿ ಜಮೀನಿನಲ್ಲಿ ನಿತ್ಯವು ಕುಳಿತುಕೊಳ್ಳುತ್ತಿದ್ದಾನೆ. ಇದು ಓರ್ವ ರೈತನ ಪಾಡಲ್ಲ. ಬದಲಾಗಿ ಅಲ್ಲಿನ ಎಲ್ಲ ರೈತರು ಇದೇ ವಿಧಾನವನ್ನು ಅನುಸರಿಸುತ್ತಿದ್ದಾರೆ.
ಇದನ್ನೂ ಓದಿ:ಪಾರ್ವತಮ್ಮ ರಾಜ್​ಕುಮಾರ್​ ತಮ್ಮನ ಮಗನಿಗೆ ಅಪಘಾತ; ಬಲಕಾಲು ಕಳೆದುಕೊಂಡ ಯುವ ನಟ ಸೂರಜ್​
Uttar Pradesh | Farmers in Lakhimpur Kheri's Jahan Nagar village use a bear costume to prevent monkeys from damaging their sugarcane crop
40-45 monkeys are roaming in the area and damaging the crops. We appealed to authorities but no attention was paid. So we (farmers)…pic.twitter.com/IBlsvECB2A
— ANI UP/Uttarakhand (@ANINewsUP)June 25, 2023

ಆ ಏರಿಯಾದಲ್ಲಿ ಸುಮಾರು 40 ರಿಂದ 45 ಕೋತಿಗಳು ನಿತ್ಯವು ಅಲೆದಾಡುತ್ತಾ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರು ಕೂಡ ಈ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದ ನಾವು ಹಣವನ್ನು ಹೊಂದಿಸಿಕೊಂಡು 4 ಸಾವಿರ ರೂಪಾಯಿಗೆ ಕರಡಿ ವೇಷದ ದಿರಿಸನ್ನು ಖರೀದಿಸಿದ್ದೇವೆ. ಈ ಮೂಲಕ ನಮ್ಮ ಬೆಳೆಗಳನ್ನು ನಾವೇ ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಗಜೇಂದ್ರ ಸಿಂಗ್​ ಎಂಬ ರೈತ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಲಖೀಂಪುರ್​ ಖೇರಿ ವಲಯ ಅರಣ್ಯಾಧಿಕಾರಿ ಸಂಜಯ್​ ಬೈಸ್ವಾಲ್​, ಬೆಳೆಗಳಿಗೆ ಹಾನಿ ಮಾಡುತ್ತಿರುವ ಕೋತಿಗಳನ್ನು ತಡೆಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.(ಏಜೆನ್ಸೀಸ್​)
ಹಗಲು-ರಾತ್ರಿ ದುಡಿದು ಪತ್ನಿಯ ಓದಿಗೆ ನೆರವು: ಸರ್ಕಾರಿ ಕೆಲಸ ಸಿಗುತ್ತಿದ್ದಂತೆ ಗಂಡನಿಗೆ ಬಿಗ್ ಶಾಕ್!​

ಹೊನ್ನಾವರ ಪೊಲೀಸ್ ಠಾಣೆಯಲ್ಲೇ ಸಾವಿಗೆ ಶರಣಾದ ಆರೋಪಿ; ಪಿಐ, ಪಿಎಸ್​ಐ ಸೇರಿ ಐವರು ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 1 =
Remember me
