ಲಖನೌ:ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಈ ಗಂಡ ಹೆಂಡತಿಯ ಜಗಳ ಅದೆಷ್ಟರ ಮಟ್ಟಿಗೆ ಮುಂದುವರಿದಿತ್ತೆಂದರೆ, ಹೆಂಡತಿ ಗಂಡನ ಮರ್ಮಾಂಗದ ಮೇಲೇ ಚಾಕುವಿನಿಂದ ದಾಳಿ ಮಾಡಿಬಿಟ್ಟಿದ್ದಾಳೆ.
ಉತ್ತರಪ್ರದೇಶದ ಫಥೇಪುರ ಜಿಲ್ಲೆಯ ಲಾಲೌಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆ ಗಂಡ ಹೆಂಡತಿ ಮಧ್ಯೆ ಜಗಳ ನಡೆಯುತ್ತಿರುತ್ತಂತೆ. ಆದರೆ ಇತ್ತೀಚೆಗೆ ಜಗಳ ತಾರಕಕ್ಕೇರಿದೆ. ಹೆಂಡತಿ ಸಿಟ್ಟಿನಿಂದ ಗಂಡನ ಮರ್ಮಾಂಗಕ್ಕೆ ಚಾಕುವಿನಿಂದ ಚುಚ್ಚಿದ್ದಾಳೆ. ಇದೀಗ ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನನ್ನ ಹೆಂಡತಿಗೆ ಬೇರೊಬ್ಬ ಹುಡುಗನೊಂದಿಗೆ ಅಕ್ರಮ ಸಂಬಂಧವಿದೆ. ಅದೇ ಕಾರಣಕ್ಕೆ ಆಕೆ ನನ್ನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾಳೆ ಎಂದು ಹಲ್ಲೆಗೊಳಗಾಗಿರುವ ಗಂಡ ಆರೋಪಿಸಿದ್ದಾನೆ. ಆದರೆ ಹೆಂಡತಿ ಈ ಆರೋಪವನ್ನು ತಳ್ಳಿ ಹಾಕಿದ್ದಾಳೆ. ನನ್ನ ಗಂಡನಿಗೆ ಬೇರೊಂದು ಹೆಂಗಸಿನ ಜತೆ ಅಕ್ರಮ ಸಂಬಂಧವಿದೆ. ಅದೇ ವಿಚಾರಕ್ಕೆ ಜಗಳ ಆಗಿತ್ತು. ನನ್ನನ್ನು ತಪ್ಪಿತಸ್ಥೆಯಂತೆ ತೋರಿಸುವ ಸಲುವಾಗಿ ಆತ ತಾನಾಗಿ ತಾನೇ ಹಲ್ಲೆ ಮಾಡಿಕೊಂಡು ಅದನ್ನು ನನ್ನ ಮೇಲೆ ಹಾಕಿದ್ದಾನೆ ಎಂದು ಆರೋಪಿ ಸ್ಥಾನದಲ್ಲಿರುವ ಪತ್ನಿ ಹೇಳಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ನಂತರ ನಿಜಾಂಶ ಹೊರಬರಬೇಕಿದೆ. (ಏಜೆನ್ಸೀಸ್​)

ಮದುವೆ ದಿನವೇ ನಾಪತ್ತೆಯಾದ ವಧು! ಅಕ್ಕನ ಬದಲು ತಂಗಿಗೆ ತಾಳಿ ಕಟ್ಟಿದ ವರ!

ದಾವಣಗೆರೆಯಲ್ಲಿ ಭೀಕರ ಅಪಘಾತ: ನಡುರಸ್ತೆಯಲ್ಲೇ ಹೊತ್ತಿಉರಿದ ಲಾರಿ-ಕಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 15 =
Remember me
