ಲಖನೌ: ದೇಶದಲ್ಲಿ ಅನ್​ಲಾಕ್​ ಎರಡನೇ ಹಂತ ನಡೆಯುತ್ತಿದೆ. ಆದರೆ ಕರೊನಾ ಸೋಂಕಿನ ಪ್ರಮಾಣ ಮಾತ್ರ ದಿನೇದಿನೆ ಏರುತ್ತಿದೆ. ಬಹುತೇಕ ರಾಜ್ಯಗಳು ಮತ್ತೆ ಲಾಕ್​ಡೌನ್​ ದಾರಿ ಕಂಡುಕೊಳ್ಳುತ್ತಿವೆ.
ಇದೀಗ ಆ ಸಾಲಿಗೆ ಉತ್ತರ ಪ್ರದೇಶವೂ ಸೇರಿದೆ. ನಾಳೆಯಿಂದ (ಜು.10) ಜು.13ರವರೆಗೆ ಉತ್ತರ ಪ್ರದೇಶದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ನಲ್ಲಿ ಜಾರಿಯಾಗಲಿದೆ. ಜು.10ರಂದು ಮುಂಜಾನೆಯಿಂದಲೇ ಲಾಕ್​ಡೌನ್​ ನಿಯಮಗಳು ಜಾರಿಯಾಗಲಿದ್ದು ಈ ಮೂರು ದಿನಗಳ ಅವಧಿಯಲ್ಲಿ ಮಾರ್ಕೆಟ್​ಗಳು, ವ್ಯಾಪಾರಿ ಮಳಿಗೆಗಳು, ಎಲ್ಲ ಕಚೇರಿಗಳೂ ಬಂದ್​ ಇರಲಿವೆ. ಲಾಕ್​ಡೌನ್​ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಯೋಗಿ ಆದಿತ್ಯನಾಥ್​ ಅವರು ಹೇಳಿದ್ದಾರೆ.ಇದನ್ನೂ ಓದಿ:VIDEO: ಬಾಲಿವುಡ್ ನಟಿ ನೀಡಿದ್ದ ಟಾಸ್ಕ್ ವಿಡಿಯೋ ಮೆಲುಕು ಹಾಕಿದ ಚಾಹಲ್
ಅಗತ್ಯ ಸೇವೆಗಳು ಹಾಗೇ ಮುಂದುವರಿಯಲಿದ್ದು, ರೈಲು ಸಂಚಾರವೂ ಇರಲಿದೆ. ವೈದ್ಯಕೀಯ ಸೇವೆಗಳೂ ಮುಂದುವರಿಯುತ್ತವೆ.ಹಾಗೇ ಹಳ್ಳಿ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ, ಸರ್ಕಾರಿ ಯೋಜನೆಗಳ ಅನುಷ್ಠಾನ ನಡೆಸಲು ಅನುಮತಿ ನೀಡಲಾಗಿದೆ.ಉತ್ತರ ಪ್ರದೇಶದಲ್ಲಿ ಇಲ್ಲಿಯವರೆಗೆ ಒಟ್ಟು 31, 156 ಕೊವಿಡ್​-19 ಕೇಸ್​ಗಳು ದಾಖಲಾಗಿವೆ. 845 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 20,331 ಚೇತರಿಸಿಕೊಂಡಿದ್ದಾರೆ. ಯುಪಿಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 9,980 ಎಂದು ಅಲ್ಲಿನ ಆರೋಗ್ಯ ಇಲಾಖೆ ವರದಿ ನೀಡಿದೆ.(ಏಜೆನ್ಸೀಸ್​)
ಕೇರಳದ ‘ಚಿನ್ನ’ ಪ್ರಕರಣದ ತನಿಖೆಯನ್ನು ಎನ್​​ಐಎಗೆ ವಹಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 3 =
Remember me
