ಲಖನೌ:ಕೆಲ ತಿಂಗಳಲ್ಲಿ ಹಸೆ ಮಣೆ ಏರಬೇಕಿದ್ದ ಜೋಡಿಯೊಂದು ಒಟ್ಟಿಗೆ ಕೊನೆಯುಸಿರೆಳೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಭಾವಿ ಪತ್ನಿಯನ್ನು ಕೊಲೆ ಮಾಡಿರುವ ವ್ಯಕ್ತಿ ಆಕೆಯ ದುಪ್ಪಟ್ಟದಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಉತ್ತರ ಪ್ರದೇಶದ ಹಮೀರ್​ಪುರ ಜಿಲ್ಲೆಯ ಜ್ಯೋತಿ (19) ಮತ್ತು ದೇವೆಂದ್ರ (22) ಮೃತ ದುರ್ದೈವಿಗಳು. ಜಿಲ್ಲೆಯ ಇಟೌರಾ ಗ್ರಾಮದಲ್ಲಿ ಜ್ಯೋತಿ ತನ್ನ ಅಜ್ಜನೊಂದಿಗೆ ಹಳ್ಳಿಯಲ್ಲಿ ಜೀವಿಸುತ್ತಿದ್ದಳು. ಆಕೆಗೆ ದೇವೆಂದ್ರ ಜತೆ ಮದುವೆ ನಿಶ್ಚಯವಾಗಿತ್ತು. ಭಾವಿ ಪತ್ನಿಯನ್ನು ಭೇಟಿ ಮಾಡಲೆಂದು ದೇವೆಂದ್ರ ಇಟೌರಾಕ್ಕೆ ಬಂದಿದ್ದಾನೆ. ಆಗ ಆಕೆ ದನಕ್ಕೆ ಮೇವು ತರಲೆಂದು ಹೊಲಕ್ಕೆ ಹೋಗಿದ್ದಾಗಿ ಆಕೆಯ ಅಜ್ಜ ತಿಳಿಸಿದ್ದಾನೆ. ದೇವೆಂದ್ರ ಜ್ಯೋತಿಯನ್ನು ಭೇಟಿ ಮಾಡಲು ಹೊಲಕ್ಕೆ ತೆರಳಿದ್ದಾನೆ.
ಜ್ಯೋತಿ ತನ್ನ ಸ್ನೇಹಿತೆ ಸರೋಜಾ ಜತೆ ಹೊಲದಲ್ಲಿದ್ದಳು. ಅಲ್ಲಿಗೆ ಬಂದ ದೇವೆಂದ್ರ ಆಕೆಯೊಂದಿಗೆ ಜಗಳಕ್ಕೆ ನಿಂತಿದ್ದಾನೆ. ಜಗಳ ತಾರಕಕ್ಕೇರಿದ್ದು, ಸಿಟ್ಟಿನಿಂದ ಚಾಕು ತೆಗೆದು ಆಕೆಯ ಕುತ್ತಿಗೆಯನ್ನು ಕೊಯ್ದಿದ್ದಾನೆ. ಆಕೆ ಧರಿಸಿದ್ದ ದುಪ್ಪಟ್ಟು ಎಳೆದುಕೊಂಡು ಅಲ್ಲೇ ಇದ್ದ ಆಕೇಶಿಯಾ ಮರಕ್ಕೆ ದುಪ್ಪಟ್ಟದಿಂದ ನೇಣು ಬಿಗಿದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ವಿಚಾರ ಗ್ರಾಮಸ್ಥರಿಗೆ ತಿಳಿದುಬಂದಿದ್ದು, ತಕ್ಷಣ ಸ್ಥಳಕ್ಕೆ ಓಡಿಬಂದಿದ್ದಾರೆ. ಇನ್ನೂ ಉಸಿರಾಡುತ್ತಿದ್ದ ಜ್ಯೋತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಐಪಿಎಲ್​ ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಬಿಡ್​ ಆದವರು ಯಾರು ಗೊತ್ತೇ? ಇಲ್ಲಿದೆ ಹರಾಜಿನ ಇತಿಹಾಸ…

‘ನಾ ಪುರುಷನಿಂದ ಗರ್ಭಿಣಿಯಾಗಲಿಲ್ಲ’ ಈ ಗರ್ಭಿಣಿಯ ಕಥೆ ಕೇಳಿದರೆ ನೀವೂ ಗಾಬರಿಯಾಗುತ್ತೀರ..

ಜೀವನಪೂರ್ತಿ ಜತೆಯಿರುವ ಕನಸು ಕಂಡವರು ಒಟ್ಟಿಗೇ ಜಲಸಮಾಧಿಯಾದರು…! ಕಣ್ಣೀರು ತರಿಸುವ ಕಥೆಯಿದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
