ಲಕ್ನೋ:ಇತ್ತೀಚಿನ ದಿನಗಳಲ್ಲಿ ಇವಿ ಬ್ಯಾಟರಿಗಳು ಸ್ಫೋಟಗೊಳ್ಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅದೇ ರೀತಿ ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಕೂಟರ್ ಸ್ಫೋಟಗೊಂಡು ಬೆಂಕಿ ಹೊತ್ತಿದ ಪರಿಣಾಮ ಮನೆ ಸುಟ್ಟು ಭಸ್ಮವಾಗಿರುವ ಘಟನೆ ಉತ್ತರ ಪ್ರದೇಶ ಲಕ್ನೋದಲ್ಲಿ ನಡೆದಿದೆ.
ಠಾಕೂರ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಜಲ್ ನಿಗಮ್ ರಸ್ತೆಯ ಮೊಹಮ್ಮದ್ ನಸೀಮ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಕೂಟಿ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ನಾಲ್ವರ ಕುಟುಂಬದವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಇದನ್ನೂ ಓದಿ:VIDEO| ಶಾಲಾ ಬಾಲಕಿಯ ಮೇಲೆ ಭಯಾನಕವಾಗಿ ಪದೇ ಪದೇ ದಾಳಿ ಮಾಡಿದ ಹಸುಗಳು
ಸ್ಫೋಟಗೊಂಡ ಸ್ಕೂಟರ್ ಚೈನೀಸ್ ಆಗಿದ್ದು, ಒಂದೂವರೆ ವರ್ಷದ ಹಿಂದೆ 65 ಸಾವಿರ ರೂ.ಗೆ ಖರೀದಿಸಿದ್ದಾಗಿ ಮೊಹಮ್ಮದ್ ನಸೀಮ್ ಹೇಳಿದ್ದಾರೆ. ಭಾರೀ ಸದ್ದು ಕೇಳಿಸಿದ್ದರೂ ಸ್ಫೋಟ ಸಂಭವಿಸಿದೆಯೋ ಅಥವಾ ಬೆಂಕಿ ಹೊತ್ತಿಕೊಂಡಿದೆಯೋ ಗೊತ್ತಿಲ್ಲ. ನಾನು ಸ್ಕೂಟಿಯನ್ನು ನಮ್ಮ ಮನೆಯ ನೆಲ ಮಹಡಿಯಲ್ಲಿ ಇಟ್ಟಿದ್ದೆ. ಆದರೆ ಕೆಲವು ಗಂಟೆಗಳ ನಂತರ ನಾನು ಮೆಟ್ಟಿಲುಗಳ ಕೆಳಗೆ ಬಂದು ಹೊಗೆ ಮತ್ತು ಜ್ವಾಲೆಯನ್ನು ನೋಡಿದೆ. ಕೂಡಲೇ ಅಕ್ಕಪಕ್ಕದವರ ಸಹಾಯ ಪಡೆದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇನೆ ಎಂದಿದ್ದಾನೆ.ಅಲ್ಲದೇ, ತಾನು ಯಾವಾಗಲೂ ಬ್ಯಾಟರಿ ಸ್ಕೂಟರ್ ಬಳಸುತ್ತಿದ್ದು, 15 ವರ್ಷಗಳಿಂದ ಇಂತಹ ಸ್ಕೂಟರ್​ನ್ನೇ ಬಳಸುತ್ತಿದ್ದೇನೆ. ಹಿಂದಿನ ಸ್ಕೂಟರ್‌ಗಳು ಭಾರತೀಯ ಬ್ರಾಂಡ್‌ಗಳಿಗೆ ಸೇರಿದ್ದವು. ಆದರೆ ಈ ಬಾರಿ ನಾನು ಈ ಚೈನೀಸ್ ಸ್ಕೂಟಿ ಖರೀದಿಸಿದ್ದು, ಕೇವಲ ಒಂದು ವರ್ಷದ ಬ್ಯಾಟರಿ ವಾರಂಟಿ ಇದೆ. ಜತೆಗೆ ಈ ಸ್ಕೂಟರ್‌ಗಳ ಚಾರ್ಜಿಂಗ್ ಕೇಬಲ್ ಆಗಾಗ್ಗೆ ಬಿಸಿಯಾಗುತ್ತದೆ. ಒಂದು ವೇಳೆ ಇದೇ ಕಾರಣದಿಂದಲೂ ಈ ಅವಘಡ ನಡೆದಿರಬಹುದು ಎಂದು ಎಂದು ನಸೀಮ್​​ ಹೇಳಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
