ಲಖನೌ:ಮದುವೆಯಾಗಿ ಒಂದು ತಿಂಗಳಾದರೂ ಅದೇ ಗುಂಗಿನಲ್ಲಿ ಇರುವವರು ಇದ್ದಾರೆ. ಆದರೆ ಇಲ್ಲೊಂದು ಜೋಡಿ ಕಥೆ ಬೇರೆಯದ್ದೇ ಇದೆ. ಮದುವೆಯಾಗಿ ಎರಡೇ ದಿನಕ್ಕೆ ಗಂಡನ ತಲೆ ಒಡೆದು ಹೋದ ಹೆಂಡತಿಯಿಂದಾಗಿ ಇದೀಗ ದಾಂಪತ್ಯ ಅಂತ್ಯಕಂಡಿದೆ.
ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ನುರ್ಪುರದ ಚಂದ್ರಶೇಖರ್​ ಹೆಸರಿನ ಯುವಕ ಮಾರ್ಚ್​ 15ರಂದು ಹರಿದ್ವಾರ ಮೂಲದ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಆದರೆ ದಾಂಪತ್ಯ ಆರಂಭವಾದ ಎರಡೇ ದಿನಗಳಲ್ಲಿ ಹೆಂಡತಿ ಹೊಸ ವರಸೆ ತಗೆದಿದ್ದಾಳಂತೆ. ನನಗೆ ಬೇರೊಬ್ಬ ಯುವಕನೊಂದಿಗೆ ಸಂಬಂಧವಿದೆ. ನಾನು ಅವನೊಂದಿಗೆ ಸಂಪರ್ಕದಲ್ಲಿರಬೇಕು. ಅದಕ್ಕಾಗಿ ನನಗೆ ಹೊಸ ಮೊಬೈಲ್​ ಕೊಡಿಸು ಎಂದು ಗಂಡನಲ್ಲಿ ಕೇಳಿದ್ದಾಳಂತೆ. ಅದಾದ ನಂತರ ಅವರಿಬ್ಬರ ನಡುವೆ ಈ ವಿಚಾರಕ್ಕೆ ಜಗಳವಾಗಿದೆ. ಗಂಡನ ತಲೆಗೆ ಕಬ್ಬಿಣದ ಸರಳಿನಿಂದ ಹೆಂಡತಿ ಜೋರಾಗಿ ಹೊಡೆದಿದ್ದಾಳೆ. ನಂತರ ಟಾಯ್ಲೆಟ್​ಗೆ ಹೋಗುವುದಾಗಿ ಹೇಳಿ ಹೊರಟು ಹೋಗಿದ್ದಾಳೆ. ಅದಾದ ಮೇಲೆ ಆಕೆ ನಾಪತ್ತೆಯಾಗಿದ್ದಾಳೆ.
ಈ ವಿಚಾರವಾಗಿ ಚಂದ್ರಶೇಖರ್​ ಕುಟುಂಬ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪೊಲೀಸರು ನವ ವಧುವನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಅವರಿಬ್ಬರು ಒಟ್ಟಿಗೆ ಬದುಕಲು ಸಾಧ್ಯವೇ ಇಲ್ಲವೆಂದು ಹೇಳಿದ್ದಾರೆ. ದಾಂಪತ್ಯ ಸರಿಮಾಡಲು ಸಾಕಷ್ಟು ಪ್ರಯತ್ನ ಪಟ್ಟ ಪೊಲೀಸರು ವಿಫಲವಾಗಿದ್ದಾರೆ. ಇದೀಗ ಎರಡೂ ಕುಟುಂಬ ದೂರಾಗಿ ಬದುಕಲಾರಂಭಿಸಿದೆ. (ಏಜೆನ್ಸೀಸ್​)
ನ್ಯೂಯಾರ್ಕ್​ನಲ್ಲಿ ಪ್ರಿಯಾಂಕಾರ ಇಂಡಿಯನ್​ ರೆಸ್ಟೋರೆಂಟ್​! ರೆಸ್ಟೋರೆಂಟ್​ ಹೇಗಿದೆ ನೋಡಿ…

ಹುಟ್ಟಿಸಿದ್ದು ತಾಯಿಯೇ ಆದರೂ ಲಿಂಗ ನೀಡುವುದು ಮರಳು! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − eleven =
Remember me
