ಹರ್ದೋಯಿ:ಅನೇಕ ಜನರು ಕಷ್ಟಪಟ್ಟು ತಮಗೆ ಇಷ್ಟ ಬಂದಂತೆ ಸುಂದರವಾದ ಮನೆ ಕಟ್ಟಿಕೊಳ್ಳುತ್ತಾರೆ. ಇದಕ್ಕಾಗಿ ಹಣ ಹೊಂದಿಸಲು ಹಗಲಿರುಳು ಶ್ರಮಿಸಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಯಾರ ಸಹಾಯವಿಲ್ಲದೇ ನೆಲದಡಿಯಲ್ಲಿ ಮನೆಯನ್ನು ಕಟ್ಟಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹರ್ದೋಯಿ ಮೂಲದ ಇರ್ಫಾನ್ ಅಲಿಯಾಸ್ ಪಪ್ಪುಬಾಬಾ ಇತರರಿಗಿಂತ ವಿಭಿನ್ನವಾಗಿ ಮನೆ ಕಟ್ಟಿಕೊಂಡಿದ್ದಾರೆ. 12 ವರ್ಷ ಕಷ್ಟಪಟ್ಟು ನೆಲದಡಿಯಲ್ಲಿ ಎರಡಂತಸ್ತಿನ ಮನೆ ನಿರ್ಮಿಸಿ, ಮೇಲಿನಿಂದ ಬಂಕರ್​ನಂತೆ ಕಾಣುವ ಮನೆಯನ್ನು ಮಣ್ಣಿನಿಂದ ನಿರ್ಮಿಸಿರುವುದು ಮತ್ತೊಂದು ವಿಶೇಷವಾಗಿದೆ. ಇದಕ್ಕಾಗಿ ತಮ್ಮ ಜಮೀನಿನಿಂದ ಆ ಮಣ್ಣನ್ನು ತಂದು ನಿರ್ಮಿಸಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ಬಸ್​ನ ಕಿಟಕಿಯಿಂದ ತಲೆ ಹೊರಹಾಕಿದ ಮಹಿಳೆ: ಕ್ಷಣ ಮಾತ್ರದಲ್ಲೇ ನಡೆದಿತ್ತು ದುರಂತ..!
2010ರಲ್ಲಿ ಇರ್ಫಾನ್ ತಂದೆಯ ಮರಣದ ನಂತರ, ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ ಹುಟ್ಟೂರಾದ ಹರ್ದೋಯ್‌ಗೆ ಬಂದು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದನು. ತಂದೆಯನ್ನು ಕಳೆದುಕೊಂಡು, ಚುನಾವಣೆಯಲ್ಲಿ ಸೋತ ಆತ ಖಿನ್ನತೆಗೆ ಒಳಗಾಗಿ ಬೇರೆ ರಾಜ್ಯಕ್ಕೆ ವಲಸೆ ಹೋಗಿದ್ದರು. ಆದರೆ ಮತ್ತೆ ತಮ್ಮ ಕನಸಿನ ಮನೆ ಕಟ್ಟಲು ಯೋಚಿಸಿ ಹರ್ದೋಯ್ ಗ್ರಾಮಕ್ಕೆ ಕಾಲಿಟ್ಟ.2011ರಲ್ಲಿ, ಆತ ತನ್ನ ಕನಸಿನ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿ, ಕುಡುಗೋಲಿನಿಂದ ಹಿಂದಿನ ಕಾಲದಂತೆಯೇ ಮನೆಯ ಗೋಡೆಗಳನ್ನು ಅಂಡಾಕಾರದ ಆಕಾರದಲ್ಲಿ ಕೆತ್ತಲು ಶುರು ಮಾಡಿದ್ದನು. ಕೂಲಿ ಮತ್ತು ಮೇಸ್ತ್ರಿಗಳನ್ನು ನೇಮಿಸದೆ ಒಬ್ಬರೇ ಮನೆ ಕಟ್ಟಲು ತಯಾರಿ ನಡೆಸಿದ್ದ ಆತ ಮನೆ ಕಟ್ಟುವ ದಿನಗಳಲ್ಲಿ ಊಟ, ಮಲಗಲು ಮಾತ್ರ ಅವರ ಮನೆಗೆ ಹೋಗುತ್ತಿದ್ದನು.ಇದನ್ನೂ ಓದಿ:ಕುತ್ತಿಗೆಯಲ್ಲಿ ಹಳದಿ ಬಣ್ಣ ಹೊಂದಿರುವ ಅಪರೂಪದ ಹಾವಿನ ಮರಿ ಪತ್ತೆ..
ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯದೇ ಸದಾ ಕೆಲಸದಲ್ಲಿಯೇ ತಲ್ಲಿಣನಾಗಿದ್ದ ಇರ್ಫಾನ್​​, ಒಟ್ಟು 12 ವರ್ಷಗಳ ಪರಿಶ್ರಮದ ನಂತರ ಇತ್ತೀಚೆಗಷ್ಟೇ ಸ್ವಂತ ಕನಸಿನ ಮನೆಯನ್ನು ಪೂರ್ಣಗೊಳಿಸಿದ್ದಾನೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಅಡುಗೆ ಕೋಣೆ, ಮಲಗುವ ಕೋಣೆ, ಬಾತ್ ರೂಂ, ಪೂಜಾ ಕೊಠಡಿ, ಡ್ರಾಯಿಂಗ್ ರೂಂ ಸೇರಿದಂತೆ ಸಕಲ ಸೌಕರ್ಯಗಳಿರುವ 11 ಕೊಠಡಿಗಳ ಮನೆಯನ್ನು ನಿರ್ಮಿಸಿದ್ದಾನೆ. ಈತ ನಿರ್ಮಿಸಿರುವ ಮನೆಯನ್ನು ನೋಡಿ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ತಿಳಿದವರೆಲ್ಲರೂ ಈ ಮನೆಯನ್ನು ನೋಡಲು ಧಾವಿಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − ten =
Remember me
