ಲಖನೌ:ಕರೊನಾ ಪೂರ್ತಿ ದೇಶವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಆಕ್ಸಿಜನ್​ ಸಿಗದೆ ಪ್ರತಿದಿನ ನೂರಾರು ಮಂದಿ ಬಲಿಯಾಗುವಂತೆ ಮಾಡಿದೆ. ಇಂಥ ಸಮಯದಲ್ಲಿ ಎಲ್ಲೋ ಕೆಲವರು ಸಮಾಜ ಸೇವೆಗೆ ಮುಂದಾಗಿರುವುದನ್ನು ನಾವು ನೋಡಬಹುದು. ಅದೇ ರೀತಿ ಉತ್ತರ ಪ್ರದೇಶದ ಉದ್ಯಮಿಯೊಬ್ಬರು ಸೋಂಕಿತರಿಗೆ ಕೇವಲ 1 ರೂಪಾಯಿಗೆ ಆಕ್ಸಿಜನ್​ ಸಿಲಿಂಡರ್​ ಕೊಡುವ ಮೂಲಕ ದೇವರಾಗಿದ್ದಾರೆ.
ಹಮಿರ್ಪುರ ಜಿಲ್ಲೆಯ ಉದ್ಯಮಿ ಮನೋಜ್​ ಗುಪ್ತಾ ಈ ರೀತಿ ಪರೋಪಕಾರ ಮಾಡುತ್ತಿರುವ ವ್ಯಕ್ತಿ. ಅಂದ ಹಾಗೆ ಈ ಮನೋಜ್​ಗೆ ಕಳೆದ ವರ್ಷ ಕರೊನಾ ಸೋಂಕು ದೃಢವಾಗಿತ್ತಂತೆ. ಆ ಸಮಯದಲ್ಲಿ ಅವರು ಅನುಭವಿಸಿದ ನೋವಿನಿಂದ ಅವರು ಬೇಸತ್ತಿದ್ದರಂತೆ. ಸೋಂಕಿತರ ನೋವು ಗೊತ್ತಿರುವ ಕಾರಣದಿಂದಾಗಿ ಇದೀಗ ಸೋಂಕಿತರ ಸಹಾಯಕ್ಕೆ ಅವರು ಮುಂದಾಗಿದ್ದಾರೆ. ತಮ್ಮ ಕಾರ್ಖಾನೆಯಲ್ಲಿ ಪ್ರತಿದಿನ 1 ಸಾವಿರ ಆಕ್ಸಿಜನ್​ ಸಿಲಿಂಡರ್​ ತುಂಬಿಸುವ ಸಾಮರ್ಥ್ಯವಿದ್ದು, ಸೋಂಕಿತರು ಅಥವಾ ಅವರ ಸಂಬಂಧಿಗಳಿಂದ 1 ರೂಪಾಯಿ ಪಡೆದು ಒಂದು ಆಕ್ಸಿಜನ್​ ಸಿಲಿಂಡರ್​ ತುಂಬಿಸಿಕೊಡುತ್ತಿದ್ದಾರೆ.
ಹೆಚ್ಚಿನ ಹಣ ಕೊಟ್ಟು ಆಕ್ಸಿಜನ್​ ಸಿಲಿಂಡರ್​ ಖರೀದಿಸಲಾಗದ ಸಾಕಷ್ಟು ಬಡವರು ಮನೋಜ್​ ಬಳಿ ಬಂದು ಆಕ್ಸಿಜನ್​ ಪಡೆದು ಹೋಗುತ್ತಿದ್ದಾರೆ. ಸೋಂಕಿತರ ಆರ್​ಟಿಪಿಸಿಆರ್​ ವರದಿ ತೋರಿಸಿದವರಿಗೆ ಆಕ್ಸಿಜನ್​ ಕೊಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ! ರಾಜ್​ಕುಮಾರ್​ ಬರ್ತ್​ಡೇ ವಿಷ್​ ಮಾಡಿದ ಆರ್​ಸಿಬಿ

ಐ ಡ್ರಾಪ್​ ಬದಲು ನೈಲ್​ ಗ್ಲ್ಯೂವನ್ನು ಕಣ್ಣಿಗೆ ಹಾಕಿಕೊಂಡ ಮಹಿಳೆ! ಆಮೇಲೆ ಏನಾಯ್ತು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
