ಲಖನೌ: ಜಗತ್ತನ್ನೆ ತಲ್ಲಣಗೊಳಿಸಿರುವ ಕರೊನಾ ಸೋಂಕು ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಸಚಿವೆಯೊಬ್ಬರ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ವರುಣ್(62) ಸೋಂಕಿಗೆ ಒಳಗಾಗಿ ಮೃತಪಟ್ಟವರು. ಅವರು ಉತ್ತರ ಪ್ರದೇಶದ ತಾಂತ್ರಿಕ ಶಿಕ್ಷಣ ಸಚಿವೆಯಾಗಿದ್ದರು.
ಕಾನ್ಪುರದ ಘಟಂಪುರ ಕ್ಷೇತ್ರದ ಶಾಸಕಿಯಾಗಿದ್ದ ಕಮಲಾ ರಾಣಿ 11 ಮತ್ತು 12ನೇ ಅವಧಿಯ ಲೋಕಸಭೆಯ ಸದಸ್ಯರೂ ಆಗಿದ್ದರು. ಕಮಲಾ ರಾಣಿ ಅವರಿಗೆ ಜುಲೈ 18ರಂದು ಕರೊನಾ ದೃಢಪಟ್ಟಿದ್ದು, ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನ ಗುಣಲಕ್ಷಣ ಉಲ್ಬಣಗೊಂಡ ಕಾರಣ ನಂತರ ಅವರನ್ನು ಎಸ್​ಜಿಪಿಜಿಐಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಶ್ರೀರಾಮನೇ ಇಲ್ಲ ಅಂದೋರು ಪೂಜೆಗೆ ಕರೆದಿಲ್ಲ ಅನ್ನೋದು ಸರಿನಾ?- ಬಿಜೆಪಿ ಟಾಂಗ್‌
ರಾಜ್ಯ ಸರ್ಕಾರ ಸಚಿವೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಲ್ಲದೆ, ಮೃತರ ಗೌರವಾರ್ಥ ಎಲ್ಲ ಶೋಕಾಚರಣೆ ಘೋಷಿಸಿದೆ. ಹೀಗಾಗಿ ಇಂದು ನಿಗದಿಯಾಗಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಯೋಧ್ಯೆ ಭೇಟಿಯೂ ರದ್ದುಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಸಚಿವೆ ಕಮಲಾ ರಾಣಿ ಅವರ ನಿಧನದ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)
ಫ್ರೆಂಡ್​ಷಿಪ್​ ಡೇ: ಪ್ರೀತಿಪಾತ್ರರೆಲ್ಲ ಕೈಬಿಟ್ಟು ಹೋದಾಗ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
