ಕನ್ನೌಜ್​:ಹೋಳಿ ಹಬ್ಬದ ರಂಗು ಎಲ್ಲೆಡೆ ಕಳೆಗಟ್ಟಿದೆ. ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ನೌಕರನೊಬ್ಬ ವೇತನ ಕೇಳಲು ಹೋಗಿದ್ದು, ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಿಜೆಪಿ ಮಾಜಿ ಶಾಸಕನ ಮಗನಿಂದಲೇ ಕೊಲೆ ನಡೆದಿರುವುದಾಗಿ ಹೇಳಲಾಗಿದೆ.
ಬಿಜೆಪಿ ಮಾಜಿ ಶಾಸಕ ಬನ್ವಾರಿ ಲಾಲ್​ ದೊಹರೆ ಅವರ ಮನೆಯಲ್ಲಿ ಸಂದೇಶ್​ ಹೆಸರಿನ ನೌಕರನಿದ್ದ. ಈತ ಪನ್ಬಾದ್​ ಗ್ರಾಮದ ನಿವಾಸಿಯಾಗಿದ್ದು, ಬನ್ವಾರಿ ಅವರ ಮನೆಯಲ್ಲಿ ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ. ಆದರೆ ಕಳೆದ ಆರು ತಿಂಗಳಿನಿಂದ ಸಂದೇಶ್​ಗೆ ಸಂಬಳವನ್ನೇ ಕೊಟ್ಟಿರಲಿಲ್ಲವಂತೆ. ಅದರಲ್ಲೂ ಹೋಳಿ ಹಬ್ಬ ಬೇರೆ ಬಂದಿದ್ದರಿಂದಾಗಿ ಸಂದೇಶ್​ ಮಾರ್ಚ್​ 25ರಂದು ಬನ್ವಾರಿ ಅವರ ಮಗ ಅಜಿತ್​ ದೊಹರೆ ಬಳಿ ಸಂಬಳ ಕೇಳಿದ್ದಾನೆ.
ಆದರೆ ಸಂಬಳ ಕೇಳಿದ್ದಕ್ಕೆ ಅಜಿತ್​ ಕೋಪಗೊಂಡಿದ್ದಾನೆ. ಸಂದೇಶ್​ ಮತ್ತು ಅಜಿತ್​ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಅಜಿತ್​ ಸಂದೇಶನಿಗೆ ಹೊಡೆದಿದ್ದಾನೆ. ಬಂದೂಕಿನಿಂದ ಹಿಂಭಾಗದಿಂದ ಹೊಡೆದ ಹಿನ್ನೆಲೆಯಲ್ಲಿ ಸಂದೇಶ್​ ದೇಹದಿಂದ ಸಾಕಷ್ಟು ರಕ್ತ ಹೊರಚಿಮ್ಮಿದೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೂರು ದಿನಗಳ ನಂತರ ಕೊನೆಯುಸಿರೆಳೆದಿದ್ದಾನೆ. ಈ ಕುರಿತಾಗಿ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)
ನಟಿ, ರಾಜಕಾರಣಿ ರೋಜಾ ಆಸ್ಪತ್ರೆಗೆ ದಾಖಲು: ಐಸಿಯುನಿಂದ ಸ್ಥಳಾಂತರ

ಅಪ್ಪನ ಆಸ್ತಿಯನ್ನು ಅಣ್ಣ ಗುಟ್ಟಾಗಿ ಮಾರಿದ್ದಾನೆ- ನಮ್ಮ ಮದುವೆಗೆ ಆತ ಖರ್ಚು ಮಾಡಿದ್ದರಿಂದ ಪಾಲು ಸಿಗುವುದಿಲ್ಲವೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + 11 =
Remember me
