ನವದೆಹಲಿ:ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅಹಮದಾಬಾದ್​ನಲ್ಲಿ ನಡೆದ “ನಮಸ್ತೆ ಟ್ರಂಪ್​” ಕಾರ್ಯಕ್ರಮವನ್ನು ಮುಗಿಸಿ ನೇರವಾಗಿ ತಮ್ಮ ಕುಟುಂಬ ಸಮೇತ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ಮಹಲ್ ಅನ್ನು ಕಣ್ತುಂಬಿಕೊಳ್ಳಲು ಆಗ್ರಾಗೆ ಬಂದಿಳಿದರು.
ಇಂದು ಬೆಳಗ್ಗೆಯಷ್ಟೇ ಅಹಮದಾಬಾದ್​ನ ಸರ್ದಾರ್​ ವಲ್ಲಭಭಾಯಿ ಪಟೇಲ್​ ವಿಮಾನ ನಿಲ್ದಾಣಕ್ಕೆ ಪತ್ನಿ ಮೆಲಾನಿಯಾ ಟ್ರಂಪ್​, ಪುತ್ರಿ ಇವಾಂಕ ಮತ್ತು ಅಳಿಯ ಜರೇದ್​ ಕುಶ್ನರ್​ ಹಾಗೂ ಅಮೆರಿಕ ನಿಯೋಗದೊಂದಿಗೆ ಅಧ್ಯಕ್ಷ ಟ್ರಂಪ್​ ಬಂದಿಳಿದರು. ಬಳಿಕ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ತಾಜ್​ ಮಹಲ್ ನೋಡುವ ಇಂಗಿತವನ್ನು ಟ್ರಂಪ್​ ವ್ಯಕ್ತಪಡಿಸಿದ್ದರು.
ಅದರಂತೆ ಅಹಮದಾಬಾದ್​ನಿಂದ ಕುಟುಂಬ ಸಮೇತ ತೆರಳಿದ ಟ್ರಂಪ್​ ಸಂಜೆ 4.20ರ ಹೊತ್ತಿಗೆ ಆಗ್ರಾಗೆ ಬಂದಿಳಿದರು. ಈ ವೇಳೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್​ ಮತ್ತು ಮುಖ್ಯಮಂತ್ತಿ ಯೋಗಿ ಆದಿತ್ಯಾ ನಾಥ್​ ಟ್ರಂಪ್​ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಾಂಪ್ರದಾಯಿಕ ಕಲೆಗಳ ಮೂಲಕ ಟ್ರಂಪ್​ ದಂಪತಿಗೆ ಗೌರವ ಸಲ್ಲಿಸಿದರು. ಬಳಿಕ ಕಾರು ಹತ್ತಿ ಟ್ರಂಪ್​ ದಂಪತಿ ತಾಜ್​ ಮಹಲ್​ ಕಡೆ ಹೊರಟರು.(ಏಜೆನ್ಸೀಸ್​)
#WATCHUS President Donald Trump and First Lady Melania Trump received by UP Governor Anandiben Patel and Chief Minister Yogi Adityanath in Agra.pic.twitter.com/eUJYtY1nIv
— ANI (@ANI)February 24, 2020

Uttar Pradesh: US President Donald Trump and First Lady Melania Trump land at Agra airport. They will visit the Taj Mahal shortly.pic.twitter.com/YyIx7TlfVD
— ANI (@ANI)February 24, 2020

Uttar Pradesh: US President Donald Trump and First Lady Melania Trump received by UP Governor Anandiben Patel and Chief Minister Yogi Adityanath in Agra.pic.twitter.com/d53DDzMi35
— ANI (@ANI)February 24, 2020

Uttar Pradesh: US President Donald Trump and First Lady Melania Trump and Ivanka Trump and Jared Kushner witness artists perform at the airport in Agra.pic.twitter.com/H50fFLCimU
— ANI (@ANI)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
