ಲಖನೌ:ಡಾನ್ಸ್​ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಇಂದಿನ ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಬಹುತೇಕರಿಗೆ ಕ್ಯಾಮೆರಾ ಮುಂದೆ ಸೊಂಟ ಬಳುಕಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ವಿಡಿಯೋ ಕ್ರೇಜ್​ ಅಂತೂ ಸರ್ವೆ ಸಾಮಾನ್ಯ ಎನ್ನುವಂತಿದೆ. ಅವಕಾಶ ಸಿಕ್ಕಾಗಲೆಲ್ಲ ಡಾನ್ಸ್​ ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಾರೆ. ರಾತ್ರೋರಾತ್ರಿ ಸೆಲೆಬ್ರಿಟಿ ಆಗಬೇಕೆಂಬ ಕನಸು ಹೊಂದಿರುತ್ತಾರೆ. ಲೈಕ್ಸ್​, ಶೇರ್​ಗಾಗಿ ಸೊಂಟ ಬಳುಕಿಸುತ್ತಾರೆ. ಆದರೆ, ಅದೇ ವಿಡಿಯೋ ಕ್ರೇಜ್​ ಕೆಲವೊಮ್ಮೆ ವಿವಾದ ಸಹ ಸೃಷ್ಟಿ ಮಾಡುತ್ತದೆ ಎಂಬುದು ಪರಮ ಸತ್ಯವಾಗಿದ್ದು, ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.
ಮೂವರು ಮಹಿಳಾ ಕಾನ್ಸ್​ಟೇಬಲ್​ಗಳು ಸಿನಿಮಾ ಹಾಡಿಗೆ ಹೆಜ್ಜೆ ಹಾಕುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹಾಗಾದರೆ, ಪೊಲೀಸ್​ ಆದ ಮಾತ್ರಕ್ಕೆ ಡಾನ್ಸ್​ ಮಾಡಬಾರದಾ? ಡಾನ್ಸ್​ ಮಾಡಿದರೆ ತಪ್ಪೇನಿದೆ? ಎಂಬ ಪ್ರಶ್ನೆ ಮೂಡಬಹುದು. ಡಾನ್ಸ್​ ಮಾಡಿದರೆ ತಪ್ಪೇನಿಲ್ಲ. ಆದರೆ, ಡಾನ್ಸ್​ ಮಾಡುವ ಜಾಗ ಯಾವುದು ಎಂಬುದರ ಅರಿವು ಇರಬೇಕು. ಮೂವರು ಮಹಿಳಾ ಕಾನ್ಸ್​ಟೇಬಲ್​ಗಳು ಪೊಲೀಸ್​ ಠಾಣೆಯಲ್ಲೇ ಸೊಂಟ ಬಳಕಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಲೇಡಿ ಕಾನ್ಸ್​ಟೇಬಲ್​ಗಳು ಭೋಜ್​ಪುರಿ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತುಂಬಾ ಹಾಟ್​ ಆಗಿ ಸೊಂಟ ಬಳಕಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದೆ. ಸದ್ಯಕ್ಕೆ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಖುಷಿನಗರ ಪೊಲೀಸ್​ ಠಾಣೆಯಲ್ಲಿ ನಡೆದಿದೆ.
ಡಾನ್ಸ್​ ಮಾಡುವುದು ತಪ್ಪಲ್ಲ ಆದರೆ, ಪೊಲೀಸ್​ ಠಾಣೆಯಲ್ಲಿ ಮಾಡುವುದು ತಪ್ಪು. ಹೀಗಾಗಿ ಮೂವರು ಮಹಿಳಾ ಕಾನ್ಸ್​ಟೇಬಲ್​ಗಳ ವಿರುದ್ಧ ಅವರು ಕೆಲಸ ಮಾಡುವ ಠಾಣೆಯಲ್ಲೇ ದೂರು ದಾಖಲಾಗಿದೆ. ಮೂವರ ವಿರುದ್ಧ ಹಿರಿಯ ಪೊಲೀಸ್​ ಅಧಿಕಾರಿಗಳು ಶಿಸ್ತುಕ್ರಮಕ್ಕೆ ಸೂಚನೆ ನೀಡಿದ್ದಾರೆ.(ಏಜೆನ್ಸೀಸ್​)

ನನ್ನ ಗುರಿ ಏನಿದ್ರು ರೆಸ್ಟ್ ಆಫ್ ದಿ ವರ್ಲ್ಡ್ ಎಂದು ಗುಡುಗಿದ ರಾಕಿ ಭಾಯ್​: ಜಗತ್ತು ಗೆಲ್ಲಲು ಹೊರಟ ಯಶ್​

ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ. ದೇಣಿಗೆ: ಮೊದಲ ದಿನವೇ ಗಂಗಾವತಿ ಮಾಜಿ-ಹಾಲಿ ಶಾಸಕರಿಗೆ ಜನಾರ್ದನ ರೆಡ್ಡಿ ಶಾಕ್​

ಮಕ್ಕಳ ಊಟಕ್ಕೆ 500 ರೂ. ಬೇಡಿದ ಬಡ ಮಹಿಳೆ: ಹರಿದುಬಂದ ಹಣದ ನೆರವಿನ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 18 =
Remember me
