ಲಖನೌ:ಪ್ರಯಾಗ್​ರಾಜ್​ ಮತ್ತು ಪ್ರತಾಪಗಢ ಸೇರಿ ಉತ್ತರ ಪ್ರದೇಶದ ಐದು ಜಿಲ್ಲೆಗಳು ಕರೊನಾ ವೈರಸ್​ ಮುಕ್ತ ಜಿಲ್ಲೆಗಳೆಂದು ಗುರುತಿಸಲ್ಪಟ್ಟಿವೆ.
ಪ್ರಯಾಗ್​ರಾಜ್​ದ ಒಂದು ಹಾಗೂ ಪ್ರತಾಪಗಢದ ಆರು ವ್ಯಕ್ತಿಗಳಿಗೆ ಶುಕ್ರವಾರ ನಡೆಸಲಾದ ಮೂರನೇ ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಬಂದಿದೆ.
ಫಿಲಿಬಿತ್​ ಮತ್ತು ಮಹಾರಾಜ್​ಗಂಜ್​ ನಂತರ ಹತ್ರಾಸ್​, ಪ್ರಯಾಗ್​ರಾಜ್​ ಮತ್ತು ಪ್ರತಾಪ್​ಗಢ ಜಿಲ್ಲೆಗಳನ್ನು ಕರೊನಾ ವೈರಸ್​ ಮುಕ್ತ ಜಿಲ್ಲೆಗಳೆಂದು ಘೋಷಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತ್​ ಮೋಹನ್​ ಪ್ರಸಾದ್​ ಮಾತನಾಡಿ, ಹತ್ರಾಸ್​ ಜಿಲ್ಲೆಯ ನಾಲ್ಕು ಪಾಸಿಟಿವ್​ ರೋಗಿಗಳ ಎರಡನೇ ವರದಿ ನೆಗೆಟಿವ್​ ಆಗಿದೆ ಎಂದರು. ಎಲ್ಲ ನಾಲ್ಕೂ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕ್ವಾರಂಟೈನ್​ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಪಾಸಿಟಿವ್​ ಕೇಸ್​ಗಳಿಲ್ಲ ಎಂದು ಹತ್ರಾಸ್​ ಜಿಲ್ಲೆಯ ಮ್ಯಾಜಿಸ್ರೇಟ್​ ಪ್ರವಿಣ್​ ಕುಮಾರ್​ ಲಕ್ಸಾರ್​ ತಿಳಿಸಿದ್ದಾರೆ.
ಕೌಶಾಂಬಿಯ ಇಬ್ಬರು ರೋಗಿಗಳ ಪೈಕಿ ಒಬ್ಬ ರೋಗಿಯ ಫಲಿತಾಂಶ ಶುಕ್ರವಾರ ಮೂರನೇ ಪರೀಕ್ಷೆಯಲ್ಲಿ ನೆಗೆಟಿವ್​ ಆಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.(ಏಜೆನ್ಸೀಸ್​)
ಲಾಕ್​ಡೌನ್​ ಅವಧಿಯಲ್ಲಿ ದೇಶದ ಮೂಲೆ ಮೂಲೆಗೂ ಔಷಧ ತಲುಪಿದ್ದು ಹೇಗೆ ಗೊತ್ತಾ? ಇಲ್ಲಿದೆ ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ

ಕಾಶ್ಮೀರಿ ವಿದ್ಯಾರ್ಥಿಗಳು ದೇಶದ್ರೋಹ ಎಸಗಿದ್ದಕ್ಕೆ ಸಾಕ್ಷ್ಯಾಧಾರಗಳಿಲ್ಲ ಹೈಕೋರ್ಟ್​ ನ್ಯಾಯಪೀಠ ಅಭಿಪ್ರಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 7 =
Remember me
