ಡೆಹ್ರಾಡೂನ್​:ಮಾವನ ಮನೆಯವರು ಕಳುಹಿಸಿದ ಲೆಹೆಂಗಾ ಇಷ್ಟವಾಗದಿದ್ದಕ್ಕೆ ವಧುವೊಬ್ಬಳು ಮದುವೆಯನ್ನೇ ರದ್ದು ಮಾಡಿರುವ ವಿಚಿತ್ರ ಘಟನೆ ಉತ್ತರಾಖಂಡದ ಹಲ್​ದ್ವಾನಿಯಲ್ಲಿ ನಡೆದಿದೆ.
ಹಲ್​ದ್ವಾನಿ ಮೂಲದ ವಧು ಮತ್ತು ಆಲ್ಮೋರಾ ಮೂಲದ ವರನಿಗೂ ಕಳೆದ ಜೂನ್​ ತಿಂಗಳಲ್ಲಿ ನಿಶ್ಚಿತಾರ್ಥ ನಡೆದಿತ್ತು. ಇಬ್ಬರ ಮದುವೆ ನ.5ಕ್ಕೆ ನಡೆಯಬೇಕಿತ್ತು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ವರನ ಕುಟುಂಬಕ್ಕೆ ಇದೀಗ ವಧುವಿನ ಕುಟುಂಬದವರು ಬಿಗ್​ ಶಾಕ್​ ನೀಡಿದ್ದಾರೆ. ಲೆಹೆಂಗಾ ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣ ನೀಡಿ ಮದುವೆ ರದ್ದು ಮಾಡಿಕೊಂಡಿದ್ದಾರೆ.
ಪರಸ್ಪರ ಆರೋಪ-ಪ್ರತ್ಯಾರೋಗಳಿಂದಾಗಿ ಕಳೆದ ಅ.30ರಂದೇ ಎರಡು ಕುಟುಂಬ ಮದುವೆ ರದ್ದು ಮಾಡಿಕೊಳ್ಳಲು ಬಯಸಿದ್ದರು. ಸಂಬಂಧಿಕರು ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿ, ವಿಫಲವಾದ ಬಳಿಕ ಎರಡು ಮನೆಯವರು ಕೊಟ್ವಾಲಿ ಪೊಲೀಸ್​ ಠಾಣೆಗೆ ಆಗಮಿಸಿದ್ದರು. ಬಳಿಕ ಠಾಣೆಯಲ್ಲಿ ಎರಡು ಕುಟುಂಬದವರಿಗೆ ಬುದ್ಧಿ ಮಾತಿನ ಜತೆಗೆ ಎಚ್ಚರಿಕೆ ನೀಡಿದ ಬಳಿಕ ಕೊನೆಗೂ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು.
ಸಂಪ್ರದಾಯದಂತೆ ಇತ್ತೀಚೆಗೆ ವರನ ತಂದೆ ವಧುವಿಗೆ 10 ಸಾವಿರ ರೂ. ಮೌಲ್ಯದ ಲೆಹೆಂಗಾವನ್ನು ಕಳುಹಿಸಿಕೊಟ್ಟಿದ್ದರು. ಆದರೆ, ಲೆಹೆಂಗಾ ಇಷ್ಟವಾಗಲಿಲ್ಲ ಎಂಬ ವಿಚಾರಕ್ಕೆ ಎರಡು ಕುಟುಂಬಗಳು ನಡುವೆ ಮನಸ್ತಾಪ ಮತ್ತು ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿದೆ. ಕೊನೆಗೆ ವಧು ಮದುವೆಯನ್ನೇ ರದ್ದು ಮಾಡಿಕೊಂಡಿದ್ದಾಳೆ.(ಏಜೆನ್ಸೀಸ್​)
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಕಾಂಡೋಮ್​ ಬಳಸುವಂತೆ ಮನವಿ ಮಾಡಿದ್ರೂ ಕೇಳಲಿಲ್ಲ: ಲಂಕಾ ಕ್ರಿಕೆಟಿಗನ ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ

ಸರ್ಕಾರಿ ನೌಕರರಿಗೆ ಬಳುವಳಿ: 7ನೇ ವೇತನ ಆಯೋಗ ರಚನೆ; ಫೆಬ್ರವರಿಯಲ್ಲಿ ಮಧ್ಯಂತರ ವರದಿ ನಿರೀಕ್ಷೆ

ಬ್ಯಾಂಕಾಕ್​ಗೆ ಪುಷ್ಪ 2 ತಂಡ; ಮೊದಲ ಶೆಡ್ಯುಲ್​ನಲ್ಲಿ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 11 =
Remember me
