ಉತ್ತರಾಖಂಡ:ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಂಪಾವತ್ ಪ್ರದೇಶದ ಸುತ್ತಮುತ್ತ ಮುಂಜಾನೆ ವಾಕಿಂಗ್ ಮಾಡುತ್ತಾ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಸ್ವಾರಸ್ಯಕರ ಪ್ರಸಂಗವೊಂದು ನಡೆದಿದ್ದು, ಸಿಎಂ ಸಾಮನ್ಯ ಜನರಂತೆ ಅಂಗಡಿಯೊಂದಕ್ಕೆ ತೆರಳಿ ಚಹಾ ಕೇಳಿದ್ದಾರೆ. ಅಂಗಡಿಯಾತ ಸಹಜವಾಗಿಯೇ ಚಹಾ ಮಾಡಿಕೊಟ್ಟಿದ್ದಾನೆ. ಆದರೆ ಆರಂಭದಲ್ಲಿ ಆತನಿಗೆ ಚಹಾ ಕೇಳಿರುವುದು ರಾಜ್ಯದ ಮುಖ್ಯಮಂತ್ರಿ ಎಂಬುದು ಗೊತ್ತಾಗಿಲ್ಲ!ಇದನ್ನೂ ಓದಿ:ಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಹಾಗೂ ಟ್ಯಾಂಕರ್ ನಡುವೆ ಅಪಘಾತ; ಮೂವರು ಗಂಭೀರ

ನಗುತ್ತಲೇ ಪ್ರತಿಕ್ರಿಯಿಸಿದ ಅಂಗಡಿಯಾತ ನಿಮ್ಮನ್ನು ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಫೋಟೋದಲ್ಲಿ ನೋಡುವುದಕ್ಕೂ, ಮುಖತಃ ಕಾಣುವುದಕ್ಕೂ ವ್ಯತ್ಯಾಸವಿದೆ ಎಂದು ಹೇಳಿಕೊಂಡಿದ್ದಾರೆ. ಬಳಿಕ ಅಂಗಡಿಯಾತನೊಂದಿಗೆ ಚಹಾ ಹೀರುತ್ತಾ ಮಾತನಾಡಿದರು. ಎರಡು ದಿನಗಳ ಚಂಪಾವತ್ ಪ್ರವಾಸದಲ್ಲಿ ಯುವ ಸಹೋದ್ಯೋಗಿಗಳು ಮತ್ತು ಸ್ಥಳೀಯ ಜನರನ್ನು ಭೇಟಿ ಮಾಡಿ ಸಾರ್ವಜನಿಕ ಕಲ್ಯಾಣ ಯೋಜನೆಗಳು ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ಪಡೆದುಕೊಂಡಿದ್ದಾರೆ.
ಬಳಿಕ ಸಾರ್ವಜನಿಕರೊಂದಿಗೆ ಮಾತನಾಡುತ್ತಾ ಕುಂದು ಕೊರತೆಗಳ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಫೋಟೋ ಹಂಚಿಕೊಂಡು, ದೇವರಂತಿರುವ ಸಾರ್ವಜನಿಕರ ಮುಖದಲ್ಲಿ ಕಾಣುವ ಸಂತೃಪ್ತಿಯ ಭಾವವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಪ್ರೇರೇಪಿಸುತ್ತದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ:ಕಾರು-ಲಾರಿ ಮಧ್ಯೆ ಭೀಕರ ಅಪಘಾತ; ಅಗ್ನಿವೀರ್‌‌ನನ್ನು ಸೈನ್ಯಕ್ಕೆ ಕಳಿಸಲು ಹೊರಟವರು ಸೇರಿದ್ದು ಮಸಣಕ್ಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 1 =
Remember me
