ಡೆಹ್ರಾಡೂನ್ :ಉತ್ತರಾಖಂಡದ ಹೊಸ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಐಸೋಲೇಷನ್​ನಲ್ಲಿರಿಸಿ ವೈದ್ಯಕೀಯ ಶುಶ್ರೂಷೆ ನೀಡಲಾಗುತ್ತಿದೆ. ಕಳೆದೆರಡು ದಿನಗಳಲ್ಲಿ ರಾವತ್ ರಾಜ್ಯದ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಅವರ ನಿಕಟ ಸಂಪರ್ಕಕ್ಕೆ ಬಂದ ಸಚಿವರು, ಅಧಿಕಾರಿಗಳು ಮತ್ತು ಇತರ ಜನರ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ.
“ನನ್ನ ಕರೊನಾ ಟೆಸ್ಟ್ ಪಾಸಿಟೀವ್​ ಬಂದಿದೆ. ನಾನು ಆರಾಮವಾಗಿದ್ದೇನೆ, ಯಾವುದೇ ತೊಂದರೆ ಇಲ್ಲ. ವೈದ್ಯರ ಮಾರ್ಗದರ್ಶನದಲ್ಲಿ ನಾನು ಐಸೋಲೇಟ್ ಮಾಡಿಕೊಂಡಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಹತ್ತಿರದ ಸಂಪರ್ಕಕ್ಕೆ ಬಂದಂತಹವರು ಎಚ್ಚರವಾಗಿರಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ರಾವತ್ ಟ್ವೀಟ್ ಮಾಡಿದ್ದಾರೆ. ಹಾಗೇ “ನಾನು ಎಲ್ಲರ ಉತ್ತಮ ಆರೋಗ್ಯವನ್ನು ಬಯಸುತ್ತೇನೆ” ಎಂದೂ ಹೇಳಿದ್ದಾರೆ.
ಇದನ್ನೂ ಓದಿ:ಸುಖಾಸುಮ್ಮನೇ ತಿರುಗಾಡಬೇಡಿ ! ಜನನಿಬಿಡ ಸ್ಥಳಗಳಲ್ಲಿ ರಾಂಡಮ್ ಕರೊನಾ ಟೆಸ್ಟಿಂಗ್ !!
ಭಾನುವಾರದಂದು ಸಿಎಂ ರಾವತ್, ರಾಮನಗರ ಮತ್ತು ಡೆಹರಾಡೂನ್ ಜಿಲ್ಲೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲದೆ ಗರ್ಜಿಯಾ ಮಂದಿರಕ್ಕೆ ಕೂಡ ಭೇಟಿ ನೀಡಿದ್ದರು. ಶನಿವಾರ ಹರಿದ್ವಾರದಲ್ಲಿ ಗಂಗಾಪೂಜೆ ಮಾಡಿದ ರಾವತ್ ಹಲವು ಸಂತರನ್ನು ಭೇಟಿ ಮಾಡಿದ್ದರು.
ರಾವತ್​ ಅವರು ಇಂದು ನವದೆಹಲಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವಿತ್ತು. ದೆಹಲಿಯಲ್ಲಿ, ಪ್ರಧಾನಿ ಮೋದಿ, ಅಮಿತ್ ಷಾ ಮತ್ತು ಇತರ ಸಂಪುಟ ಸಚಿವರನ್ನು ಭೇಟಿಯಾಗಬೇಕಿತ್ತು. ಅದಕ್ಕೂ ಮುಂಚೆ ಕರೊನಾ ಪರೀಕ್ಷೆಯ ಫಲಿತಾಂಶ ಪಾಸಿಟೀವ್ ಬಂದಿದ್ದು, ಇದೀಗ ತಮ್ಮ ನಿವಾಸದಲ್ಲೇ ಐಸೋಲೇಷನ್​ನಲ್ಲಿರಲು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಆಟದ ನಡುವೆ ಪೆಟ್ಟಿಗೆ ಒಳಕ್ಕೆ ಜಿಗಿದ ಮುಗ್ಧ ಮಕ್ಕಳು… ಅಲ್ಲಿ ಕಾಯುತ್ತಿದ್ದ ಜವರಾಯ !

“200 ವರ್ಷ ‘ಅಮೆರಿಕ’ದ ಗುಲಾಮರಾಗಿದ್ದೆವು” ಎಂದ ಉತ್ತರಾಖಂಡ ಸಿಎಂ !

‘ಧೂಮ್ ಆರ್ ಡೂಮಡ್ ?’ – ಬೈಕ್ ಸ್ಟಂಟ್ ಮಾಡುವ ಜನರಿಗೆ ಪೊಲೀಸರ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 2 =
Remember me
