ಡೆಹ್ರಾಡೂನ್ (ಉತ್ತರಾಖಂಡ):ಕರೊನಾ ಸೋಂಕು ಯಾರನ್ನು, ಯಾವಾಗ, ಹೇಗೆ ಆವರಿಸುತ್ತದೆಯೋ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಕರೊನಾ ಸೋಂಕು ಬಾಧಿಸುವ ಶಂಕೆ ಇದ್ದ ತಕ್ಷಣ ಅಥವಾ ಯಾವುದಾದರೂ ಸೋಂಕಿತರನ್ನು ತಿಳಿದೋ, ತಿಳಿಯದೆಯೋ ಸಂಪರ್ಕ ಮಾಡಿದರೆ ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್​ಗೆ ಒಳಗಾಗುವುದು ಉತ್ತಮ.
ಅದೇ ಕಾರಣಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೇರಿದಂತೆ ಸಚಿವರಾದ ಹರಕ್ ಸಿಂಗ್ ರಾವತ್, ಮದನ್ ಕೌಶಿಕ್ ಮತ್ತು ಸುಬೋಧ್ ಯುನಿಯಲ್ ಸೋಮವಾರ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.
ಇದನ್ನೂ ಓದಿ:ಬರಲಿದೆ ಕರೊನಾಕ್ಕಿಂತಲೂ ಭೀಕರ ವೈರಸ್​- ಅರ್ಧ ಜನಸಂಖ್ಯೆ ಖತಂ​ ಎಂದಿದ್ದಾರೆ ವಿಜ್ಞಾನಿಗಳು!
ಅಷ್ಟಕ್ಕೂ ಇವರು ಕ್ವಾರಂಟೈನ್​ಗೆ ಒಳಗಾಗಲು ಕಾರಣ ಎಂದರೆ ಕರೊನಾ ಸೋಂಕಿತ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರನ್ನು ಇವರು ಭೇಟಿ ಮಾಡಿದ್ದರು. ಈ ಭೇಟಿಗೂ ಮುನ್ನ ಸಚಿವ ಸತ್ಪಾಲ್​ ಅವರಿಗೆ ಸೋಂಕು ಇರುವ ವಿಷಯ ತಿಳಿದಿರಲಿಲ್ಲ. ಆದರೆ ಭೇಟಿಯ ನಂತರ ಸೋಂಕಿನ ಬಗ್ಗೆ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲರೂ ಈಗ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.
ಸತ್ಪಾಲ್ ಮಹಾರಾಜ್ ಅವರ ಸಂಪರ್ಕಕ್ಕೆ ಬಂದಿದ್ದ ಪತ್ನಿ, ಕುಟುಂಬ ಸದಸ್ಯರು, ಸಿಬ್ಬಂದಿ ಮತ್ತು ಅವರ ಸಂಪರ್ಕಕ್ಕೆ ಬಂದ ಒಟ್ಟೂ 21 ಮಂದಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಇದನ್ನೂ ಓದಿ:ಕರೊನಾ ವೈರಸ್​ ಹೆಂಡತಿ ಇದ್ದಂತೆ ಎಂದ ಸಚಿವ: ಆಮೇಲೇನಾಯ್ತು ನೀವೇ ನೋಡಿ…
‘ಸಚಿವರು ಮತ್ತು ಅಧಿಕಾರಿಗಳು ಸತ್ಪಾಲ್ ಮಹಾರಾಜ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರದ ಕಾರಣ, ಸೋಂಕು ತಗುಲಿರುವ ಸಾಧ್ಯತೆ ತೀರಾ ಕಡಿಮೆ. ಆದ್ದರಿಂದ ಅವರು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ತಿಳಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ರಿಸ್ಕ್​ ಬೇಡ ಎನ್ನುವ ಕಾರಣದಿಂದ ಅವರು ಸ್ವಯಂಪ್ರೇರಿತರಾಗಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.
VIDEO: ಸೋನು ಅಂಕಲ್​… ಅಮ್ಮನನ್ನು ಅಜ್ಜಿ ಮನೆಗೆ ಕಳಿಸ್ತೀರಾ? ಪುಟಾಣಿ ಪ್ರಶ್ನೆಗೆ ನಟ ಕಂಗಾಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 15 =
Remember me
