ನವದೆಹಲಿ/ಡೆಹ್ರಾಡೂನ್:ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಾಖಂಡದ ಸಚಿವ ಯಶ್​ಪಾಲ್​ ಆರ್ಯ ಮತ್ತು ಅವರ ಮಗ ಶಾಸಕರಾದ ಸಂಜೀವ್ ಆರ್ಯ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದಾರೆ. ಆರು ಬಾರಿ ಸತತ ಶಾಸಕರೂ, ಪ್ರಮುಖ ದಲಿತ ಮುಖಂಡರೂ ಆಗಿರುವ ಯಶ್​ಪಾಲ್​ ಆರ್ಯ ಅವರ ನಿರ್ಗಮನ ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಉಂಟುಮಾಡಬಲ್ಲದು ಎನ್ನಲಾಗಿದೆ.
ಯಶ್​ಪಾಲ್​ ಅವರು ರಾಜ್ಯ ಕಾಂಗ್ರೆಸ್​ನ ಮಾಜಿ ಅಧ್ಯಕ್ಷರಾಗಿದ್ದು, 2017 ರ ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಬಿಜೆಪಿ ಸರ್ಕಾರದ ನಿಕಟಪೂರ್ವ ಸಿಎಂ ಹರೀಶ್​ ರಾವತ್​ ಅವರ ಕಾರ್ಯವಿಧಾನದ ಬಗ್ಗೆ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಸಿಎಂ ಪುಷ್ಕರ್​ ಧಾಮಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು.
ಇದನ್ನೂ ಓದಿ:ಕ್ಷುಲ್ಲಕ ವಿಚಾರವಾಗಿ ಗಲಾಟೆ, ತಂದೆಯಿಂದಲೇ ಮಗನ ಬರ್ಬರ ಕೊಲೆ
ಇಂದು ಕಾಂಗ್ರೆಸ್​ ಹಿರಿಯ ನಾಯಕರಾದ ಹರೀಶ್ ರಾವತ್ ಮತ್ತು ಕೆ.ಸಿ.ವೇಣುಗೋಪಾಲ್​ ಅವರ ಉಪಸ್ಥಿತಿಯಲ್ಲಿ ತಂದೆ-ಮಗ ಕಾಂಗ್ರೆಸ್​ ಸೇರ್ಪಡೆಯಾದರು. ನಂತರ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಯಶ್​ಪಾಲ್​ ಈಗಷ್ಟೇ ಉತ್ತರಾಖಂಡದ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ.(ಏಜೆನ್ಸೀಸ್)
ಇಂದು ಬೆಣ್ಣೆನಗರಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಾಸ್ತವ್ಯ

ರಾಂಪ್​ ವಾಕ್​ ಮಾಡಿ ಗಮನ ಸೆಳೆದ ಕರೀನಾ; ‘ನನ್ನ ಆಯ್ಕೆಗೆ ಬಿಟ್ಟಿದ್ದರೆ, ಕಫ್ತಾನ್ ತೊಟ್ಟಿರುತ್ತಿದ್ದೆ’ ಎಂದರು!

ಆಮ್‌ ಆದ್ಮಿ ಪಾರ್ಟಿಗೆ ವಕೀಲ ಜಗದೀಶ್ ಸೇರ್ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
