ಡೆಹ್ರಾಡೂನ್​ :ಉತ್ತರಾಖಂಡದ 10 ನೇ ಮುಖ್ಯಮಂತ್ರಿಯಾಗಿದ್ದ ತೀರಥ್​ ಸಿಂಗ್ ರಾವತ್​ ಅವರ ರಾಜೀನಾಮೆಯ ನಂತರ ಇಂದು ಮುಂದಿನ ಸಿಎಂ ಯಾರಾಗಬೇಕೆಂದು ತಿರ್ಮಾನಿಸುವುದಕ್ಕೆ ಡೆಹ್ರಾಡೂನಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಯಲಿದೆ. ಮುಂದಿನ ಸಿಎಂಗಿರಿಗೆ ಸೂಚಿಸಲ್ಪಡುತ್ತಿರುವ ಹೆಸರುಗಳೆಂದರೆ, ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಶಾಸಕರಾದ ಸತ್ಪಾಲ್​ ಮಹರಾಜ್​, ಧನ್​ ಸಿಂಗ್ ರಾವತ್ ಮತ್ತು ಪುಷ್ಕರ್ ಸಿಂಗ್​ ಧಾಮಿ ಎನ್ನಲಾಗಿದೆ.
ತೀರಥ್​ ಸಿಂಗ್​ ಅವರು ನಾಲ್ಕು ತಿಂಗಳ ಕೆಳಗಷ್ಟೆ ಸಿಎಂ ಆಗಿದ್ದರೂ, ಪಕ್ಷದ ರಾಜ್ಯ ಘಟಕದಲ್ಲಿನ ಒಳಜಗಳದಿಂದಾಗಿ ಅವರಿಗೆ ಹುದ್ದೆಯಿಂದ ಕೆಳಗಿಳಿಯುವಂತೆ ಬಿಜಿಪಿ ವರಿಷ್ಠರು ಹೇಳಿದ್ದಾರೆ ಎನ್ನಲಾಗಿದೆ. ಉತ್ತರಾಖಂಡದ ಸಂಸದರಾಗಿದ್ದ ತೀರಥ್ ಸಿಂಗ್ ಮಾರ್ಚ್​ನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಸೆಪ್ಟೆಂಬರ್​ 10 ರೊಳಗೆ ವಿಧಾನಸಭಾ ಸದಸ್ಯರಾಗಿ ಚುನಾಯಿತರಾಗಬೇಕಿತ್ತು.
ಇದನ್ನೂ ಓದಿ:ಕರೊನಾ ಸೇನಾನಿಗಳಿಗೆ ಹೂವಿನ ಮಳೆಗರೆದು ಸನ್ಮಾನ
ಇನ್ನೇನು ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಬೇಕಾದ ರಾಜ್ಯದಲ್ಲಿ ಈಗ ಸದ್ಯಕ್ಕೆ ಕರೊನಾದಿಂದ ಉಪಚುನಾವಣೆ ನಡೆಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿರುವುದು ತೀರಥ್​ ಸಿಂಗ್​ರನ್ನು ಕೈಬಿಡುವ ನಿರ್ಧಾರಕ್ಕೆ ಮತ್ತೊಂದು ಕಾರಣವಾಗಿದೆ ಎನ್ನಲಾಗಿದೆ.
ಬಿಜೆಪಿಯ 57 ಶಾಸಕರು ಪಕ್ಷದ ಕೇಂದ್ರೀಯ ವೀಕ್ಷಕ ಸಚಿವರಾದ ನರೇಂದ್ರ ಸಿಂಗ್ ತೋಮರ್​ ಮತ್ತು ರಾಜ್ಯ ಉಸ್ತುವಾರಿ ದುಷ್ಯಂತ್ ಕುಮಾರ್​ ಗೌತಮ್​ ಅವರ ಉಪಸ್ಥಿತಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ ಮುಂದಿನ ಸಿಎಂ ಬಗೆಗಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಬಿಜೆಪಿ ಮುಖ್ಯಸ್ಥ ಮದನ್​ ಕೌಶಿಕ್​ ಹೇಳಿದ್ದಾರೆ.(ಏಜೆನ್ಸೀಸ್​)
ನಟ ಶಂಕರ್​ನಾಗ್​​ರ ಈ ಹಿಂದಿ ಚಿತ್ರ ನೋಡಿದ್ದೀರಾ?

ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿದ ಕಿರಾತಕ! ಗಂಡಹೆಂಡತಿ ಜಗಳಕ್ಕೆ ಮಕ್ಕಳಿಗೆ ಸಜೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + five =
Remember me
